ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಬೆಳಗಾವಿ: ಪರೋಕ್ಷವಾಗಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ನಾಯಿ ಎಂಬ ಪದದಿಂದ ಸಂಬೋಧಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ ಸಿ ಟಿ ರವಿ ಹೇಳಿಕೆ ನೀಡಿದ್ದಾರೆ. ಅವರು ಬೆಳಗಾವಿ ಖಾಸಗಿ ಹೋಟೆಲ್ದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ಕಾಲಕಾಲಕ್ಕೆ ತಕ್ಕಂತೆ ಕಾಂಗ್ರೆಸ್ ಬದಲಾವಣೆ ಆಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಕಾಂಗ್ರೆಸ್ ಬೇರೆ, ಈಗಿರುವ ಕಾಂಗ್ರೆಸ್ ಬೇರೆ. ದೇಶಕ್ಕೆ ಕಾಂಗ್ರೆಸ್ ಸ್ವಾತಂತ್ರ್ಯ ತಂದು ಕೊಟ್ಟಿದೆ ಎಂದು ಆ ಪಕ್ಷದ ನಾಯಕರು ಹೇಳ್ತಾರೆ. ಸ್ವಾತಂತ್ರ್ಯ ಕೊಡುಗೆ ಕೊಟ್ಟಿರೋದು ಭಾರತ ಲೂಟಿ ಮಾಡೋದಕ್ಕಾ..? ಎಂದು ಪ್ರಶ್ನಿಸಿದ್ದಾರೆ.
ಇಟಲಿ ಕಾಂಗ್ರೆಸ್:ಮಾಜಿ ಸ್ಪೀಕರ್ರಮೇಶ್ಕುಮಾರ್ ಹೇಳಿದಂತೆ ಕಾಂಗ್ರೆಸ್ ನಾಯಕರು ನಾಲ್ಕೈದು ತಲೆಮಾರಿಗಾಗುವಷ್ಟು ಆಸ್ತಿ ಮಾಡಿಕೊಂಡಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕಾಂಗ್ರೆಸ್ ಬೇರೆ, ಈಗಿರುವ ಕಾಂಗ್ರೆಸ್ ಬೇರೆ. ಭಾರತದಲ್ಲಿ ಈಗಿರೋದು ಇಟಲಿ ಕಾಂಗ್ರೆಸ್ ಎಂದು ರವಿ ಟೀಕಿಸಿದರು.
ಬೊಗಳುವ ನಾಯಿ:ಇಟಲಿ ಕಾಂಗ್ರೆಸ್ ನಾಯಿಗಳೂ ಭಾರತದ ಪರವಾಗಿ ಬೊಗಳುವುದಿಲ್ಲ. ಪಾಕಿಸ್ತಾನ, ಚೀನಾ ದೇಶಗಳ ಪರವಾಗಿ ಬೊಗಳುತ್ತಿವೆ. ಚೀನಾದ ಎಂಜಲು ತಿಂದಿವೆ. ಪಾಕಿಸ್ತಾನ ಪರವಾಗಿ ಬೊಗಳುವ ನಾಯಿಯನ್ನು ಸಾಕಿದ್ದಿರಿ. ಮಹಾತ್ಮ ಗಾಂಧಿಯ ಕಾಲದ ನಾಯಿ ಅಲ್ಲ. ಕಾಂಗ್ರೆಸ್ ನಾಯಿ ಸರ್ಜಿಕಲ್ ಸ್ಟ್ರೈಕ್ ಆದ್ರೆ ಭಾರತದ ವಿರುದ್ಧವಾಗಿ ಬೊಗಳುತ್ತೆ. ಆ ನಾಯಿ ಭಾರತದ ಪರವಾಗಿ ಬೊಗಳಲ್ಲ. ಖರ್ಗೆಯವರೇ ಎಚ್ಚರವಾಗಿರಿ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ಸಿ ಟಿ ರವಿ ಹರಿಹಾಯ್ದರು.
ಡಿಕೆಶಿ ಮನೆ ಮೇಲೆ ಐಟಿ ರೇಡ್: ಐಟಿ, ಇಡಿ ಮತ್ತು ಸಿಬಿಐ ಕಚೇರಿಯಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮನೆಯಲ್ಲೇ ಆರಂಭಿಸಿ ಎಂಬ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಪ್ರಕಾರ ಡಿಕೆಶಿ ಮನೆಯಲ್ಲಿ ಅಷ್ಟೊಂದು ಅಕ್ರಮ ಆಸ್ತಿ ಇದೆಯಾ ಸಿ ಟಿ ರವಿ ಪ್ರಶ್ನಿಸಿದರು.
ಈ ಬಗ್ಗೆ ಡಿಕೆಶಿ ಅರ್ಥ ಮಾಡ್ಕೊಬೇಕು. ದುಷ್ಮನ್ ಬಗಲ್ ಮೇ ಹೈ, ಆಪ್ ಕಾ ಪಾರ್ಟಿ ಮೇ ಹೈ ಎಂದು ಕುಟುಕಿದರು. ಡಿಕೆಶಿಯವರೇ ಸುರ್ಜೇವಾಲಾರಿಂದ ಅಂತರ ಕಾಯ್ದುಕೊಳ್ಳಿ. ನೀವು ಪ್ರಾಮಾಣಿಕ, ಪಾರದರ್ಶಕವಾಗಿದ್ದರೆ ಏನು ಮಾಡಲು ಸಾಧ್ಯವಿಲ್ಲ ಕಾಲೆಳೆದರು.
ಇದನ್ನೂಓದಿ:ಚೀನಾ ನುಗ್ಗಿದಂತೆ ಕರ್ನಾಟಕದೊಳಕ್ಕೆ ನುಗ್ಗುತ್ತೇವೆ: ಕಿಡಿ ಹೊತ್ತಿಸಿದ ಸಂಜಯ್ ರಾವುತ್!