ಚಿಕ್ಕೋಡಿ(ಬೆಳಗಾವಿ): ಚಾಲಕನ ನಿಯಂತ್ರಣ ತಪ್ಪಿ ಬೈಕ್ ಹಾಗೂ ಮೂರು ಕಾರುಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ ಮಗ ಮತ್ತು ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಕ್ಕೇರಿಯ ರಕ್ಷಿ ಗ್ರಾಮದಲ್ಲಿ ನಡೆದಿದೆ.
ಬೈಲಹೊಂಗಲ ಪಟ್ಟಣದ ನಿವಾಸಿ ಭಾರತಿ ಪೂಜೇರಿ (28), ವೇದಾಂತ ಪೂಜೇರಿ (6) ಮೃತರು. ಭಾರತಿ ಅವರ ಪತಿ ಅನಿಲ ಪೂಜೇರಿ ಹಾಗೂ ಗೋಕಾಕ್ ತಾಲೂಕಿನ ಕಿರಣ ಸಾಲಿಮಠ (28) ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.