ಕರ್ನಾಟಕ

karnataka

ETV Bharat / state

ಜಾಗ್ರತೆಯಿಂದ ಇರುವಂತೆ ಜನರಿಗೆ ಚಿಕ್ಕೋಡಿ ಪುರಸಭೆ ಮನವಿ

ಚಿಕ್ಕೋಡಿ ತಾಲೂಕಿನಲ್ಲಿ ಆಗಸ್ಟ್​ 5ರವರೆಗೆೆ ವ್ಯಾಪಾರಸ್ಥರು ನಿರ್ಣಯಿಸಿದಂತೆ ​ಸ್ವಯಂ ಪ್ರೇರಿತವಾಗಿ ಲಾಕ್​ಡೌನ್​ ಇರುತ್ತದೆ ಎಂದು ಪುರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.

ಚಿಕ್ಕೋಡಿ ಪುರಸಭೆ ಪ್ರಕಟಣೆ ಚಿಕ್ಕೋಡಿ ಪುರಸಭೆ ಪ್ರಕಟಣೆ
ಚಿಕ್ಕೋಡಿ ಪುರಸಭೆ ಪ್ರಕಟಣೆ

By

Published : Jul 20, 2020, 8:43 AM IST

ಚಿಕ್ಕೋಡಿ:ತಾಲೂಕಿನಲ್ಲಿ ಕೊರೊನಾ ಮಹಾಮಾರಿಗೆ ತುತ್ತಾದವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಜಾಗೃತರಾಗಿರಬೇಕು ಎಂದು ಚಿಕ್ಕೋಡಿ ಪುರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.

ಚಿಕ್ಕೋಡಿ ಪುರಸಭೆ ಪ್ರಕಟಣೆ

ಚಿಕ್ಕೋಡಿ ತಾಲೂಕಿನ ಸುತ್ತಮುತ್ತಲಿನ ಗ್ರಾಮದ ಹಾಗೂ ಪಟ್ಟಣದ ಜನರ ಅನಗತ್ಯ ತಿರುಗಾಟಕ್ಕೆ ನಿರ್ಬಂಧ ಹೇರಲಾಗಿದೆೆ. ಅಷ್ಟೇ ಅಲ್ಲದೆ, ಇಂದು ಮತ್ತು ನಾಳೆ ಮುಂಜಾನೆ 7ಗಂಟೆಯಿಂದ ಸಂಜೆ 6ಗಂಟೆಯವರೆಗೆ ಅಂಗಡಿ ಮುಂಗಟ್ಟುಗಳು ತೆರೆದಿರುತ್ತವೆ. ಸಾರ್ವಜನಿಕರು ಅಗತ್ಯ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಬುಧವಾರದಿಂದ ಆಗಸ್ಟ್​ 5ರವರೆಗೆೆ ವ್ಯಾಪಾರಸ್ಥರು ನಿರ್ಣಯಿಸಿದಂತೆ ​ಸ್ವಯಂ ಪ್ರೇರಿತವಾಗಿ ಲಾಕ್​ಡೌನ್​ ಇರುತ್ತದೆ ಎಂದು ತಿಳಿಸಲಾಗಿದೆ.

ABOUT THE AUTHOR

...view details