ಚಿಕ್ಕೋಡಿ: ಕೋವಿಡ್ ಎರಡನೇ ಅಲೆ ತೀವ್ರವಾಗಿ ಹರಡುತ್ತಿದೆ. ಹೀಗಾಗಿ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ಕರ್ನಾಟಕ - ಮಹಾರಾಷ್ಟ್ರದ ಕೊಂಡಿಯಾಗಿರುವ ಗಡಿ ಭಾಗದಲ್ಲಿ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಆದ್ರೆ ನಿಯಮಗಳು ಪಾಲನೆಯಾಗುತ್ತಿದೆಯಾ ಎನ್ನುವ ಪ್ರಶ್ನೆ ಜನರಲ್ಲಿ ಕಾಡತೊಡಗಿದೆ.
ರಸ್ತೆ ಬಂದ್ ಮಾಡಿದರೂ ಸಹಿತ ಮಹಾರಾಷ್ಟ್ರದಿಂದ ಜನರು ಕರ್ನಾಟಕ ಪ್ರವೇಶ ಮಾಡುತ್ತಿದ್ದಾರೆ. ನೆಗೆಟಿವ್ ವರದಿ ಇರದಿದ್ದರೂ ಕೂಡ ಕರ್ನಾಟಕ ಪ್ರವೇಶಕ್ಕೆ ಅವಕಾಶ ನೀಡುತ್ತಿದ್ದಾರೆ. ಆದ್ರೆ ಸ್ಥಳೀಯ ಅಧಿಕಾರಿಗಳು ಮೌನ ವಹಿಸಿದ್ದು, ಜನರ ಅಸಮಧಾನಕ್ಕೆ ಕಾರಣವಾಗಿದೆ.