ಬೆಳಗಾವಿ :ಪ್ರೇಮಕವಿ ಕೆ. ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿರುವ ಹಿನ್ನೆಲೆ ನಗರದ ಖಾಸಗಿ ಹೋಟೆಲ್‌ನಲ್ಲಿ ಉಭಯ ಕುಟುಂಬಸ್ಥರು ಸಂಧಾನ ಸಭೆ ನಡೆಸುತ್ತಿದ್ದಾರೆ.
ಪ್ರೇಮಕವಿಯ ಜೀವನದಲ್ಲಿ ವಿರಹರಾಗ.. ಉಭಯ ಕುಟುಂಬಸ್ಥರಿಂದ ಸಂಧಾನ'ಗೀತೆ'!! - Psychologist Dr Sandeep Patil
ಠಾಣೆಯಲ್ಲಿ ಆನ್‌ಲೈನ್ ಮೂಲಕ ಕೆ. ಕಲ್ಯಾಣ್ ಪತ್ನಿ ಅಶ್ವಿನಿಗೆ ಖ್ಯಾತ ಮನರೋಗ ತಜ್ಞ ಡಾ. ಸಂದೀಪ್ ಪಾಟೀಲ್ ಅವರು ಕಳೆದ 2 ಗಂಟೆಗಳಿಂದ ಕೌನ್ಸೆಲಿಂಗ್ ಮಾಡುತ್ತಿದ್ದಾರೆ..
ಕೆ.ಕಲ್ಯಾಣ್ ಅವರ ಸಹೋದರ, ಅತ್ತಿಗೆ ಹಾಗೂ ಅಶ್ವಿನಿ ಕಡೆಯಿಂದ ದೊಡ್ಡಪ್ಪ, ದೊಡ್ಡಮ್ಮ ಹಾಗೂ ಸಹೋದರ ಸಂಬಂಧಿ ಈಗಾಗಲೇ ಆಗಮಿಸಿದ್ದಾರೆ. ಆರಂಭದಲ್ಲಿ ಉಭಯ ಕುಟುಂಬಸ್ಥರು ಚರ್ಚಿಸಿದರು. ಬಳಿಕ ಕೆ. ಕಲ್ಯಾಣ್ ಹೋಟೆಲ್‌ನ ಕೊಠಡಿಗೆ ತೆರಳಿ ಮಾತುಕತೆ ನಡೆಸಿದರು. ಕಲಹಕ್ಕೆ ಅಂತ್ಯ ಹಾಡಲು ಉಭಯ ಕುಟುಂಬಸ್ಥರ ಮಾತುಕತೆಯಲ್ಲಿ ಕೆ. ಕಲ್ಯಾಣ ಭಾಗಿಯಾಗಿದ್ದಾರೆ.
ಆನ್‌ಲೈನ್ ಮೂಲಕ ಆಪ್ತಸಮಾಲೋಚನೆ :ಪ್ರೇಮಕವಿ ಕೆ. ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ವಿಚಾರ ಬೆಳಗಾವಿಯ ಮಾಳಮಾರುತಿ ಠಾಣೆ ಮೆಟ್ಟಿಲೇರಿತ್ತು. ಠಾಣೆಯಲ್ಲಿ ಆನ್‌ಲೈನ್ ಮೂಲಕ ಕೆ. ಕಲ್ಯಾಣ್ ಪತ್ನಿ ಅಶ್ವಿನಿಗೆ ಖ್ಯಾತ ಮನರೋಗ ತಜ್ಞ ಡಾ. ಸಂದೀಪ್ ಪಾಟೀಲ್ ಅವರು ಕಳೆದ 2 ಗಂಟೆಗಳಿಂದ ಕೌನ್ಸೆಲಿಂಗ್ ಮಾಡುತ್ತಿದ್ದಾರೆ.