ಕರ್ನಾಟಕ

karnataka

ETV Bharat / state

ಪಾದಚಾರಿಗೆ ಬೈಕ್ ಡಿಕ್ಕಿ... ಗಂಭೀರವಾಗಿ ಗಾಯಗೊಂಡು ಸಾವು - ಚಿಕ್ಕೋಡಿ ಅಪಘಾತ ಸುದ್ದಿ

ರಸ್ತೆ ಬದಿಯಲ್ಲಿ ನಿಂತಿದ್ದ ಬಸವಾರಜ ಉಮರಾಣಿ ಎಂಬುವವರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಸಂಭವಿಸಿದೆ.

bike-accident-one-person-dead
ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಜವರಾಯನಂತೆ ಬಂದ ಬೈಕ್​ ಸವಾರ...!

By

Published : Feb 21, 2020, 5:25 AM IST

ಚಿಕ್ಕೋಡಿ : ರಸ್ತೆ ಬದಿಗೆ ನಿಂತಿದ್ದ ವ್ಯಕ್ತಿಗೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಯಡೂರ ಗ್ರಾಮದಲ್ಲಿ ನಡೆದಿದೆ.

ಬಸವರಾಜ ಉಮರಾಣಿ (55) ಮೃತಪಟ್ಟ ವ್ಯಕ್ತಿ. ವೇಗವಾಗಿ ಬಂದ ಬೈಕ್​ ಸವಾರ ರಸ್ತೆ ಬದಿಯಲ್ಲಿ ನಿಂತಿದ್ದ ಬಸವರಾಜಗೆ ಡಿಕ್ಕಿ ಹೊಡೆದು ಹೋಗಿದ್ದಾನೆ. ತಲೆಗೆ ಗಂಭೀರವಾಗಿ ಪೆಟ್ಟುಬಿದ್ದು ತೀವ್ರ ರಕ್ತಸಾವ್ರವಾಗಿದೆ. ತಕ್ಷಣವೇ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಕುರಿತು ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details