ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಸೋಂಕು ಹರಡದಂತೆ ತಡೆಯಲು ಬೆಳಗಾವಿ ಜಿಲ್ಲಾಡಳಿತ ಮಾಸ್ಟರ್ ಪ್ಲಾನ್

ಕೇವಲ ಸಚಿವರು ಹಾಗೂ ವಿವಿಐಪಿಗಳಿಗೆ ಸೀಮಿತವಾಗಿದ್ದ ಬೆಂಗಾವಲು ಪಡೆಯನ್ನು ರಾಜ್ಯ ಪ್ರವೇಶಿಸುತ್ತಿರುವ ವಲಸಿಗ ವಾಹನಗಳಿಗೂ ಬಳಸಲಾಗುತ್ತಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಿಸಲು ಬೆಳಗಾವಿ ಜಿಲ್ಲಾಡಳಿತ ಜಾರಿಗೊಳಿಸಿರುವ ಈ ಯೋಜನೆ ಹೊಸ ಆಶಾಭಾವನೆ ಮೂಡಿಸಿದೆ.

check post
ಚೆಕ್​ಪೋಸ್ಟ್​​

By

Published : May 14, 2020, 8:06 PM IST

ಬೆಳಗಾವಿ:ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಸೇರಿದಂತೆ ಹಲವು ಭಾಗಗಳಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ವಲಸಿಗ ಕಾರ್ಮಿಕರಿಗೆ ತವರಿಗೆ ತೆರಳಲು ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿದೆ. ಹೀಗಾಗಿ ಸೋಂಕಿತರು ಹೆಚ್ಚಿರುವ ರಾಜ್ಯಗಳಿಂದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಚೆಕ್​ಪೋಸ್ಟ್​ಗೆ​​​​​ ನಿತ್ಯ ನೂರಾರು ವಾಹನಗಳು ಪ್ರವೇಶಿಸುತ್ತಿವೆ. ಅನೇಕರು ಕ್ವಾರಂಟೈನ್ ಸ್ಥಳಕ್ಕೆ ತೆರಳದೇ ಮನೆಗೆ ತೆರಳುತ್ತಿರುವ ಕಾರಣ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಹರಡದಂತೆ ಬೆಳಗಾವಿ ಜಿಲ್ಲಾಡಳಿತ ಮಾಸ್ಟರ್ ಪ್ಲಾನ್​​​​​​​ ಮಾಡಿದೆ.

ಬೆಳಗಾವಿ ಚೆಕ್​ಪೋಸ್ಟ್​​

ವಲಸಿಗ ಕಾರ್ಮಿಕರಿಗೆ ತವರಿಗೆ ತೆರಳಲು ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿರುವ ಕಾರಣದಿಂದ ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಿಂದ ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಚೆಕ್​ಪೋಸ್ಟ್​​ಗೆ ನಿತ್ಯ ನೂರಾರು ವಾಹನಗಳು ಪ್ರವೇಶಿಸುತ್ತಿವೆ. ಅನೇಕರು ಕ್ವಾರಂಟೈನ್ ಸ್ಥಳಕ್ಕೆ ತೆರಳದೇ ಮನೆಗೆ ತೆರಳುತ್ತಿರುವ ಕಾರಣ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ಇದನ್ನು ನಿಯಂತ್ರಿಸಲು ಜಿಲ್ಲಾಡಳಿತ ಮುಂದಾಗಿದೆ.

ಪ್ರತಿ ಜಿಲ್ಲೆಗೆ ಹೋಗುವ ಹತ್ತು ವಾಹನಗಳಿಗೆ ಒಂದೊಂದು ಬೆಂಗಾವಲು ವಾಹನ ಕಳಿಸಲಾಗುತ್ತಿದೆ. ಈ ಬೆಂಗಾವಲು ವಾಹನಕ್ಕೆ ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದ್ದು, ವಲಸಿಗರಿಗೆ ನಿಗದಿಪಡಿಸಿದ ಕ್ವಾರಂಟೈನ್ ಸ್ಥಳದಲ್ಲಿ ವಲಸಿಗರನ್ನು ಬಿಟ್ಟು ಈ ನೋಡಲ್ ಅಧಿಕಾರಿ ಮರಳುತ್ತಾರೆ. ಇದರಿಂದ ಕ್ವಾರಂಟೈನ್ ಅವಧಿ ಸಮರ್ಪಕ ಅನುಷ್ಠಾನ ಸಾಧ್ಯವಾಗುತ್ತಿದೆ ಎಂದು ಚೆಕ್​​ಪೋಸ್ಟ್ ಸಿಬ್ಬಂದಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಬೆಂಗಳೂರು, ಮಂಗಳೂರು, ಬಳ್ಳಾರಿ, ದಾವಣಗೆರೆ, ಮೈಸೂರು, ಹುಬ್ಬಳ್ಳಿ, ಕೊಪ್ಪಳ ಸೇರಿದಂತೆ ಇನ್ನಿತರ ಕಡೆ ವಲಸಿಗರು ತೆರಳುತ್ತಿದ್ದಾರೆ. ಪ್ರತಿ ಜಿಲ್ಲೆಗೆ ಹೋಗುವ ಹತ್ತು ವಾಹನಗಳಿಗೆ ಒಂದೊಂದು ಬೆಂಗಾವಲು ವಾಹನ ಕಳಿಸಲಾಗುತ್ತಿದೆ.

ಡಿಎಲ್, ಆಧಾರ್​​ ಕಾರ್ಡ್ ವಶಕ್ಕೆ:

ವಲಸಿಗರನ್ನು ಕರೆತರುತ್ತಿರುವ ಖಾಸಗಿ ವಾಹನಗಳ ಚಾಲಕರ ಡಿಎಲ್, ಆಧಾರ್​​​ ಕಾರ್ಡ್‍ಗಳನ್ನು ಕುಗನೊಳ್ಳಿ ಚೆಕ್‍ಪೋಸ್ಟ್ ಸಿಬ್ಬಂದಿ ವಶಕ್ಕೆ ಪಡೆಯುತ್ತಾರೆ. ವಲಸಿಗರನ್ನು ಬಿಟ್ಟು ಚಾಲಕರು ಅನ್ಯಮಾರ್ಗದಿಂದ ತೆರಳದೇ ಕುಗನೊಳ್ಳಿ ಚೆಕ್‍ಪೋಸ್ಟ್ ಮಾರ್ಗವಾಗಿಯೇ ತೆರಳಬೇಕು ಎಂಬ ಕಾರಣಕ್ಕೆ ದಾಖಲೆಗಳನ್ನು ವಶಕ್ಕೆ ಪಡೆಯಲಾಗುತ್ತದೆ. ಚೆಕ್​​ ಪೋಸ್ಟ್​​ನಿಂದ ತೆರಳುವಾಗ ಚಾಲಕರು ತಮ್ಮ ದಾಖಲೆಗಳನ್ನು ಪಡೆದು ವಾಪಸ್ ಪಡೆಯಬೇಕು. ಕುಗನೊಳ್ಳಿ ಚೆಕ್‍ಫೋಸ್ಟ್ ಮಾರ್ಗವಾಗಿ ಈವರೆಗೆ 1391 ವಾಹನಗಳು ಬಂದಿದ್ದು, 5251 ವಲಸಿಗರು ರಾಜ್ಯಕ್ಕೆ ಮರಳಿದ್ದಾರೆ. ಕಣಕುಂಬಿ ಚೆಕ್‍ಪೋಸ್ಟ್ ಮಾರ್ಗವಾಗಿ 588 ವಾಹನಗಳು ಬಂದಿದ್ದು, 2473 ವಲಸಿಗರು ರಾಜ್ಯಕ್ಕೆ ಮರಳಿದ್ದಾರೆ.

ABOUT THE AUTHOR

...view details