ಕರ್ನಾಟಕ

karnataka

ETV Bharat / state

100ಕ್ಕೂ ಹೆಚ್ಚು ಜನರ‌ ಶವಸಂಸ್ಕಾರ ನೆರವೇರಿಸಿದ ಆಟೋ ಚಾಲಕ ರಫೀಕ್​ ಬಡೇಘರ

ಕೊರೊನಾ ಸೋಂಕಿನಿಂದ ಮೃತಪಟ್ಟ 100 ಕ್ಕೂ ಹೆಚ್ಚು ಜನರ ಅಂತ್ಯಸಂಸ್ಕಾರ ನಡೆಸಿರುವ ಆಟೋಚಾಲಕ ರಫೀಕ್ ಬಡೇಘರ್, ಕೊರೊನಾ ಹಾವಳಿಯಿಂದ ನಲುಗಿರುವ ಬಡಜನರಿಗೂ ಉಚಿತ ಆಹಾರದ ಕಿಟ್​​ಗಳನ್ನು ವಿತರಿಸಿದ್ದಾರೆ‌.

funeral
funeral

By

Published : May 24, 2021, 9:58 PM IST

ಬೆಳಗಾವಿ: ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್​ಗೆ ಅಂಜಿ ಜನರು ಮುಂದೆ ಬರದ ಇಂತಹ ಸಂದರ್ಭದಲ್ಲೂ ಸಮಾಜ ಸೇವೆಯನ್ನೇ ಮೈಗೂಡಿಸಿಕೊಂಡಿರುವ ಆಟೋ ಚಾಲಕರೊಬ್ಬರು ತಮ್ಮ ಸ್ವಂತ ಖರ್ಚಿನಲ್ಲೇ 100ಕ್ಕೂ ಹೆಚ್ಚು ಶವ ಸಂಸ್ಕಾರ ಮಾಡುವ ಮೂಲಕ ಮಾನವೀಯ ಕಾರ್ಯಕ್ಕೆ ಮುಂದಾಗಿದ್ದಾರೆ.

ಮೂಲತಃ ಬೈಲಹೊಂಗಲ ತಾಲೂಕಿನ ಸಮಾಜ ಸೇವಕರಾದ ರಫೀಕ್ ಬಡೇಘರ ಅವರು ಸರ್ಕಾರದ ಯಾವುದೇ ಸೌಲಭ್ಯಗಳನ್ನು ಬಯಸದೇ ತಮ್ಮ ಸ್ವಂತ ಹಣದಿಂದ ಉಚಿತವಾಗಿ ಶವಸಂಸ್ಕಾರ ಮಾಡುತ್ತಿದ್ದಾರೆ. ಅಂತ್ಯ ಸಂಸ್ಕಾರದ ವೇಳೆ ಅವರವರ ಸಮಾಜದ ವಿಧಿ ವಿಧಾನಗಳೊಂದಿಗೆ ಶವಸಂಸ್ಕಾರ ನಡೆಸುತ್ತಿದ್ದಾರೆ. ಬೈಲಹೊಂಗಲ, ಸವದತ್ತಿ, ಕಿತ್ತೂರ, ರಾಮದುರ್ಗ ಸೇರಿದಂತೆ ಕಡೆ ಕೊರೊನಾ ವೈರಸ್ ಗೆ ಸಾವನ್ನಪ್ಪಿದ 100ಕ್ಕೂ ಹೆಚ್ಚು ಮೃತಪಟ್ಟವರ ಶವಸಂಸ್ಕಾರ ನೆರವೇರಿಸಿದ್ದಾರೆ.

ಇದಲ್ಲದೇ ಅನಾಥರಿಗೆ, ನಿರ್ಗತಿಕರಿಗೆ, ಬಡವರಿಗೆ ನಿತ್ಯ ಉಪಹಾರ ವ್ಯವಸ್ಥೆಯನ್ನೂ ಮಾಡುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ರಫೀಕ್ ಬಂಡೆಘೇರ್ ಅವರು ಯಾವುದೇ ದುಡ್ಡು, ಅಧಿಕಾರಕ್ಕೆ ಆಸೆ ಪಡದೇ ನಿಸ್ವಾರ್ಥ ಸೇವೆ ಮಾಡುತ್ತಿದ್ದು, ಅನಾಥರು, ನಿರ್ಗತಿಕರು, ಬುದ್ಧಿಮಾಂಧ್ಯರಿಗೆ, ಪ್ರಾಣಿ, ಪಕ್ಷಿಗಳಿಗೆ ಆಪತ್ಭಾಂಧವರಾಗಿದ್ದಾರೆ.

ABOUT THE AUTHOR

...view details