ಕರ್ನಾಟಕ

karnataka

ETV Bharat / state

ಅಥಣಿಯ ಐತಿಹಾಸಿಕ ಶ್ರೀ ಹನುಮಾನ ದೇವರ ರಥೋತ್ಸವ ಮುಂದೂಡಿಕೆ

ಕೊರೊನಾ ಭೀತಿಯಿಂದ ದೇಶದ ಎಲ್ಲಾ ದೇವಾಲಯಗಳಿಗೂ ಬಾಗಿಲು ಹಾಕಲಾಗಿದೆ. ಅದರಂತೆ ಹಲವು ದೇವಸ್ಥಾನಗಳ ಜಾತ್ರೆ, ರಥೋತ್ಸವ ಸಮಾರಂಭಗಳು ಬಂದ್ ಆಗಿವೆ. ಇದೀಗ ಅಥಣಿ ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ಶನಿವಾರದಂದು ಜರುಗಬೇಕಾಗಿದ್ದ ಶ್ರೀ ಹನುಮಾನ ದೇವರ ರಥೋತ್ಸವವನ್ನು ಕೊರೊನಾ ವೈರಸ್​ ಭೀತಿ ಹಿನ್ನೆಲೆ ಮುಂದೂಡಲಾಗಿದೆ. ಶನಿವಾರ ವಿಜೃಂಭಣೆಯಿಂದ ಜರುಗಬೇಕಾಗಿದ್ದ ಶ್ರೀ ಹನುಮಾನ ದೇವರ ರಥೋತ್ಸವ, ಶ್ರೀ ಬಸವೇಶ್ವರ ದೇವರ ಉಚಾಯಿ, ನೈವೆದ್ಯ ಅರ್ಪಣೆ, ಪಲ್ಲಕ್ಕಿ ಸೇವೆ, ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದುಡಿದ್ದಾರೆ.

Athani's historic Sri Hanuman God Chariot Festival Postponed
ಅಥಣಿಯ ಐತಿಹಾಸಿಕ ಶ್ರೀ ಹನುಮಾನ ದೇವರ ರಥೋತ್ಸವ ಲಾಕ್​ಡೌನ್​ನಿಂದ ಮುಂದೂಡಿಕೆ

By

Published : Apr 17, 2020, 8:19 PM IST

Updated : Apr 17, 2020, 10:56 PM IST

ಬೆಳಗಾವಿ: ಅಥಣಿ ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ಶನಿವಾರದಂದು ಜರುಗಬೇಕಾಗಿದ್ದ ಶ್ರೀ ಹನುಮಾನ ದೇವರ ರಥೋತ್ಸವವನ್ನು ಕೊರೊನಾ ವೈರಸ್​ ಭೀತಿ ಹಿನ್ನೆಲೆ ಮುಂದೂಡಲಾಗಿದೆ.

ತಾಲೂಕಿನ ನಂದೇಶ್ವರ ಗ್ರಾಮದಲ್ಲಿ 19ರಂದು ಸಂಜೆ ಜರುಗಬೇಕಾಗಿದ್ದ ಶ್ರೀ ಹನುಮಾನ ದೇವರ ರಥೋತ್ಸವವನ್ನು ಲಾಕ್​ಡೌನ್ ಆದೇಶ ಜಾರಿಯಿರುವುದರಿಂದ ಮುಂದೂಡಿದ್ದಾರೆ. ಶ್ರೀ ಹನುಮಾನ ದೇವರ ಕಮೀಟಿ ಸದಸ್ಯರು, ಸೇವಕರು ಹಾಗೂ ಭಕ್ತರು ಪರಸ್ಪರ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ.

ಶನಿವಾರ ವಿಜೃಂಭಣೆಯಿಂದ ಜರುಗಬೇಕಾಗಿದ್ದ ಶ್ರೀ ಹನುಮಾನ ದೇವರ ರಥೋತ್ಸವ, ಶ್ರೀ ಬಸವೇಶ್ವರ ದೇವರ ಉಚ್ಛಾಯ, ನೈವೇದ್ಯ ಅರ್ಪಣೆ, ಪಲ್ಲಕ್ಕಿ ಸೇವೆ, ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದೂಡಿದ್ದಾರೆ. ಪ್ರತಿ ವರ್ಷ ವಿಜೃಂಭಣೆಯಿಂದ ಜರಗುತ್ತಿದ್ದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ರಥೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಿದ್ದರು.

ಸದ್ಯ ದೇಶದಲ್ಲಿ ಲಾಕ್​ಡೌನ್ ಆದೇಶದಂತೆ ಜಾತ್ರೆ ಮಹೋತ್ಸವ ರದ್ದು ಮಾಡಲಾಗಿದೆ ಸರ್ಕಾದ ನಿರ್ದೇಶನ ಮೇಲೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಜಾತ್ರಾ ಕಮಿಟಿ ಹಿರಿಯರಾದ ಹನುಮಂತ ಚಂಡಕಿ ತಿಳಿಸಿದ್ದಾರೆ.

Last Updated : Apr 17, 2020, 10:56 PM IST

ABOUT THE AUTHOR

...view details