ಅಥಣಿ :ಅಥಣಿ ಮತ್ತು ಕಾಗವಾಡ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕುರಿತು ಪೂರ್ವ ಸಿದ್ಧತೆಯನ್ನು ಎರಡೂ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ಎಂ.ಎನ್. ಬಳಿಗಾರ ತಿಳಿಸಿದ್ದಾರೆ.
ಅಥಣಿ, ಕಾಗವಾಡ ಉಪಚುನಾವಣೆಗೆ ಅಧಿಕಾರಿಗಳು ಸಜ್ಜು: ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ
ಬದಲಾದ ರಾಜ್ಯ ರಾಜಕಾರಣದಲ್ಲಿ ಜಿಲ್ಲೆಯ ಅಥಣಿ ಮತ್ತು ಕಾಗವಾಡ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತಿದ್ದು, ಎರಡೂ ಕ್ಷೇತ್ರಗಳ ಮತದಾನಕ್ಕೆ ಚುನಾವಣಾ ಆಯೋಗದ ಅಧಿಕಾರಿಗಳು ಸಜ್ಜಾಗಿದ್ದಾರೆ. ಚುನಾವಣಾ ಅಕ್ರಮಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಅಥಣಿ ವಿಧಾನಸಭಾ ಕ್ಷೇತ್ರಕ್ಕೆ 22 ಸೆಕ್ಟೆರ್ ಅಧಿಕಾರಿಗಳು, 18 ಫ್ಲೈಯಿಂಗ ಸ್ಕ್ವಾಡ್ ತಂಡ, 6 ವಿಡಿಯೋಸರ್ವಿಲೆನ್ಸ್ ತಂಡ, 2 ವಿಡಿಯೋ ವೀಕ್ಷಕ ತಂಡ, 1 ವೆಚ್ಚ ನಿರ್ವಹಣಾ ತಂಡ ಮತ್ತು 7ಚೆಕ್ ಪೋಸ್ಟ್‌ಗಳಿಗೆ ಸ್ಟಾಟಿಕ್ ಸರ್ವಿಲೆನ್ಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಗವಾಡ ಮತಕ್ಷೇತ್ರದಲ್ಲಿ 7 ಕಡೆ ಚೆಕ್ಪೋಸ್ಟ್ಳನ್ನು ನಿರ್ಮಿಸಲಾಗಿದೆ. ಪ್ರತಿ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ಚುನಾವಣೆ ಪ್ರಕ್ರಿಯೆಯಲ್ಲಿ ಅಕ್ರಮ ಚಟುವಟಿಕೆ ಹಾಗೂ ಕುಂದು-ಕೊರತೆಗಳ ಬಗ್ಗೆ ದೂರು ಮತ್ತು ಸಲಹೆಗಾಗಿ 24*7 ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ. ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಸಲಹೆ ಮತ್ತು ದೂರುಗಳನ್ನು 0828289-251146ಗೆ ಕರೆ ಮಾಡಿ ತಿಳಿಸಬಹುದು.