ಅಥಣಿ (ಬೆಳಗಾವಿ):ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದಾಗಿ ತಾಲೂಕಿನಲ್ಲಿ ಪ್ರವಾಹದ ಭೀತಿ ಉಂಟಾಗಿದೆ.
ಮೈದುಂಬಿ ಹರಿಯುತ್ತಿರುವ ಕೃಷ್ಣಾ.. ನದಿಪಾತ್ರದ ಜನರಲ್ಲಿ ಮತ್ತೆ ಪ್ರವಾಹದ ಭೀತಿ - ಹಿಪ್ಪರಗಿ ಆಣೆಕಟ್ಟಿಗೆ ನೀರು
ಜಮಖಂಡಿ ಹಾಗೂ ಅಥಣಿ ತಾಲೂಕಿನ ನಡುವಿನ ಹಿಪ್ಪರಗಿ ಅಣೆಕಟ್ಟಿಗೆ, ಮಹಾರಾಷ್ಟ್ರದಿಂದ 45,000 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಆದ್ದರಿಂದ ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತದೆ.
ಪ್ರವಾಹದ ಭೀತಿಯಲ್ಲಿ ಅಥಣಿ ಜನತೆ
ಕೃಷ್ಣಾ ನದಿಯ ದಂಡೆಗೆ 17 ಗ್ರಾಮಗಳು ಹೊಂದಿಕೊಂಡಿರುವುದರಿಂದ ತಾಲೂಕಾಡಳಿತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದೆ.
ಜಮಖಂಡಿ ಹಾಗೂ ಅಥಣಿ ತಾಲೂಕಿನ ನಡುವಿನ ಹಿಪ್ಪರಗಿ ಅಣೆಕಟ್ಟಿಗೆ, ಮಹಾರಾಷ್ಟ್ರದಿಂದ 45,000 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಆದ್ದರಿಂದ ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತದೆ ಎಂದು ಹಿಪ್ಪರಗಿ ನೀರಾವರಿ ಅಧಿಕಾರಿ ವಿಠ್ಠಲ್ ನಾಯಕ್, 'ಈಟಿವಿ ಭಾರತ'ಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ.