ಬೆಳಗಾವಿ :ನಿಗದಿತ ಸಮಯಕ್ಕೆ ಬಾರದ ಮುಖ್ಯಮಂತ್ರಿಗಾಗಿ ಉರಿಬಿಸಿಲಿನಲ್ಲಿಯೇ ಕಾಯುತ್ತ ಕುಳಿತ ಪ್ರಸಂಗ ಅಥಣಿ ನೆರೆ ಸಂತ್ರಸ್ತರಿಗೆ ಒದಗಿಬಂದಿತ್ತು. ಇದರಿಂದ ತಾಲೂಕು ಆಡಳಿತದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಬರಲಿಲ್ಲ ಮುಖ್ಯಮಂತ್ರಿ ಯಡಿಯೂರಪ್ಪ.. ಬಾರದ ಸಿಎಂಗೆ ವೇದಿಕೆ, ಸಂತ್ರಸ್ತರಿಗೆ ಬಿಸಿಲೇ ಹೊದಿಕೆ.. - Athani news
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಮುಂದೆ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಕಾಯುತ್ತಿದ್ದ ಸಂತ್ರಸ್ತರು ಉರಿಬಿಸಿಲಿನಲ್ಲಿಯೇ ಕುಳಿತಿದ್ದರು. ಜಿಲ್ಲಾಡಳಿತ ಸಿಎಂಗಾಗಿ ಮಾತ್ರ ವೇದಿಕೆ ನಿರ್ಮಾಣ ಮಾಡಿದ್ದು ಸಾರ್ವಜನಿಕರು ಬಿಸಿಲಿನಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸಿಎಂ ಬರ್ತಾರ ಅಂತ ಬಿಸಿಲಲ್ಲಿ ಕಾದು ಕುಳಿತ ಸಂತ್ರಸ್ತರು
ಜಿಲ್ಲೆಯ ಅಥಣಿ ತಾಲೂಕಿನ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಮುಂದೆ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಕಾಯುತ್ತಿದ್ದ ಸಂತ್ರಸ್ತರು ಸಿಎಂ ಬರುವಿಕೆಗಾಗಿ ಊರಿಬಿಸಿಲಿನಲ್ಲಿಯೇ ಕುಳಿತಿದ್ದರು. ಜಿಲ್ಲಾಡಳಿತ ಸಿಎಂಗಾಗಿ ಮಾತ್ರ ವೇದಿಕೆ ನಿರ್ಮಾಣ ಮಾಡಿದ್ದು, ಜನರು ಬಿಸಿಲಿನಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಜನ ತಾಲೂಕು ಆಡಳಿತದ ವಿರುದ್ಧ ಹಿಡಿ ಶಾಪ ಹಾಕಿದರು.