ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮುನ್ಯಾಳ ಗ್ರಾಮದ ಹಳ್ಳದ ದಂಡೆಯಲ್ಲಿ ಶ್ರೀಗಂಧದ ಕಟ್ಟಿಗೆ ತುಂಡುಗಳನ್ನು ಕಡಿಯುತ್ತಿದ್ದ ಮೂವರನ್ನು ಮೂಡಲಗಿ ಪೋಲಿಸರು ಬಂಧಿಸಿದ್ದಾರೆ.
ಶ್ರೀಗಂಧದ ತುಂಡುಗಳು ಕಡಿಯುತ್ತಿದ್ದ ಮೂವರ ಬಂಧನ - ಮೂಡಲಗಿ ಪೊಲೀಸರು
ಹಳ್ಳದ ದಂಡೆಯಲ್ಲಿ ಶ್ರೀಗಂಧದ ಕಟ್ಟಿಗೆ ತುಂಡುಗಳನ್ನು ಕಡಿಯುತ್ತಿದ್ದವರ ಬಗ್ಗೆ ಖಚಿತ ಮಾಹಿತಿ ಪಡೆದ ಮೂಡಲಗಿ ಪೊಲೀಸರು, ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕಳ್ಳರ ಬಂಧನ
ರಾಯಬಾಗ ತಾಲೂಕಿನ ಮೂಗಳಖೋಡ ಗ್ರಾಮದ ಗೋಪಾಲ ನಾಮದೇವ ಕದಮ (50), ಮಚ್ಚೇಂದ್ರ ದತ್ತು ಕದಮ (55) ಹಾಗೂ ಪಾಲಭಾಂವಿ ಗ್ರಾಮದ ರಫೀಕ್ ಅಪ್ಪಾಸಾಬ ನಾಯಿಕವಾಡಿ (35) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇವರ ಬಳಿ ಇದ್ದ 3,38,355 ರೂ. ಬೆಲೆಯ 112 ಕೆ.ಜಿ. ಶ್ರೀಗಂಧ ಮರದ ತುಂಡುಗಳು, ಸಾಗಾಟಕ್ಕೆ ಬಳಸುತ್ತಿದ್ದ ಮೋಟರ್ ಸೈಕಲ್ ಮತ್ತು ಮರ ಕಡಿಯುವ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.