ಬೆಳಗಾವಿ:ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಚಲಾಯಿಸುತ್ತಿದ್ದ ಕಾರು ಪಲ್ಟಿಯಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಬಳಿ ನಡೆದಿದೆ. ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರು ಗೋವಾದಿಂದ ಧಾರವಾಡಕ್ಕೆ ವಾಪಸ್ ಬರುವ ವೇಳೆ ಈ ಅವಘಾತ ಸಂಭವಿಸಿದೆ.
ಅರವಿಂದ ಬೆಲ್ಲದ ಕಾರು ಪಲ್ಟಿ.. ಕೂದಲೆಳೆ ಅಂತರದಲ್ಲಿ ಶಾಸಕರು ಮತ್ತವರ ಕುಟುಂಬ ಸದಸ್ಯರು ಪಾರು! - ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ
ಶಾಸಕರು ಕುಟುಂಬ ಸಮೇತ ಗೋವಾಕ್ಕೆ ಹೋಗಿದ್ದರು. ಗೋವಾದಿಂದ ಬರುವ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗುತ್ತಿದೆ. ಅದೃಷ್ಟವಶಾತ್ ಶಾಸಕ ಅರವಿಂದ ಮತ್ತು ಅವರ ಕುಟುಂಬಸ್ಥ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ..
ಅರವಿಂದ ಬೆಲ್ಲದ ಕಾರು ಪಲ್ಟಿ
ಶಾಸಕರು ಕುಟುಂಬ ಸಮೇತ ಗೋವಾಕ್ಕೆ ಹೋಗಿದ್ದರು. ಗೋವಾದಿಂದ ಬರುವ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗುತ್ತಿದೆ. ಅದೃಷ್ಟವಶಾತ್ ಶಾಸಕ ಅರವಿಂದ ಮತ್ತು ಅವರ ಕುಟುಂಬಸ್ಥ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.