ಬೆಳಗಾವಿ/ಚೆನ್ನೈ: ಕೆಲವು ವರ್ಷಗಳಿಂದ ನನಗೆ ಮಧುಮೇಹ ಇದೆ. ಆದ್ರೆ, ಕೆಲ ಮಾಧ್ಯಮಗಳಲ್ಲಿ ಬೇರೆ ಬೇರೆ ಕಾರಣ ಹೇಳಿ ಸುಳ್ಳು ಸುದ್ದಿಗಳನ್ನು ಬಿತ್ತರ ಮಾಡುತ್ತಿದ್ದಾರೆ. ಯಾರು ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ, ಚೆನ್ನೈನ ಖಾಸಗಿ ಆಸ್ಪತ್ರೆಯಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಮನುಷ್ಯನಿಗೆ ಜೀವನದಲ್ಲಿ ಸ್ವಾಭಾವಿಕವಾಗಿ ಆರೋಗ್ಯದಲ್ಲಿ ಏರಿಳಿತ ಆಗೋದು ಸಹಜ. ಕೆಲವು ವರ್ಷಗಳಿಂದ ನನಗೆ ಮಧುಮೇಹ ಇದೆ. ಮನೆ ದೇವರಾದ ಜಾಲಿಕಟ್ಟಿ ಬಸವಣ್ಣ, ತಂದೆ-ತಾಯಿ, ರಾಜ್ಯದ ಜನರ ಆಶೀರ್ವಾದ ಇದೆ. ನಾನು ಆರೋಗ್ಯವಾಗಿದ್ದೇನೆ. ಸುಳ್ಳು ವದಂತಿಗೆ ನಮ್ಮ ಕಾರ್ಯಕರ್ತರು ಕಿವಿಗೊಡಬಾರದು ಎಂದು ತಿಳಿಸಿದ್ದಾರೆ.
ನನ್ನ ಕುಟುಂಬ ಸದಸ್ಯರು ನನ್ನ ಬೆನ್ನಿಗೆ ನಿಂತಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ, ಮಾಧ್ಯಮ ಸ್ನೇಹಿತರ ಸಹಕಾರ ಇದೆ. ಸಿಎಂ ಬಸವರಾಜ ಬೊಮ್ಮಾಯಿ ದೂರವಾಣಿ ಮೂಲಕ ಆರೋಗ್ಯ ವಿಚಾರಿಸಿದ್ದಾರೆ. ಯಾವುದೇ ಕಾರಣಕ್ಕೂ ಧೈರ್ಯಗೆಡುವ ಪ್ರಶ್ನೆಯೇ ಇಲ್ಲ. ನಾವೆಲ್ಲರೂ ನಿಮ್ಮ ಬೆನ್ನಿಗಿದ್ದೇವೆ ಎಂದು ಸಿಎಂ ಹೇಳಿದ್ದಾರೆ. ಬಿಎಸ್‌ವೈ ಸೇರಿದಂತೆ ಅನೇಕ ಶಾಸಕರು ನನಗೆ ಸಲಹೆ ಕೊಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ವಿಡಿಯೋ ಹೇಳಿಕೆ ಬಿಡುಗಡೆ ಇದನ್ನೂ ಓದಿ: ಚೆನ್ನೈ ಆಸ್ಪತ್ರೆಗೆ ದಾಖಲಾದ ಡೆಪ್ಯೂಟಿ ಸ್ಪೀಕರ್ ಆನಂದ್ ಮಾಮನಿ
ಆ ನಿಟ್ಟಿನಲ್ಲಿ ನಾನು ಧೈರ್ಯವಾಗಿ ಬಂದು ತಮ್ಮೆಲ್ಲರ ಸೇವೆಗೆ ಮತ್ತೆ ಅಣಿಯಾಗುತ್ತೇನೆ. ನಾನು ಚೆನ್ನೈನಲ್ಲಿರುವ ಕಾರಣಕ್ಕೆ ಚಿಂತಾಜನಕ, ಶಿಫ್ಟ್ ಮಾಡ್ತಾರೆ ಅನ್ನೋದು ಯಾವುದು ಇಲ್ಲ. ಚೆನ್ನೈ ಆಸ್ಪತ್ರೆಗೆ ದೊಡ್ಡ ವೈದ್ಯರು ಬಂದ ಬಳಿಕ ತಪಾಸಣೆ ಮಾಡಿಸಿ ಔಷಧಿ ತೆಗೆದುಕೊಂಡು ಬರುತ್ತೇನೆ. ಆದಷ್ಟು ಬೇಗ ರಾಜಧಾನಿಗೆ ಬಂದು ತಮ್ಮ ಸಂಪರ್ಕಕ್ಕೆ ಸಿಗುತ್ತೇನೆ ಎಂದು ತಿಳಿಸಿದ್ದಾರೆ.