ಚಿಕ್ಕೋಡಿ :ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿದ್ದ ಮಳೆ ಗಣನೀಯವಾಗಿ ಇಳಿಕೆಯಾಗಿದೆ. ಇದರಿಂದ ವಿವಿಧ ಜಲಾಶಯಗಳಿಂದ ಬಿಡುಗಡೆ ಆಗುತ್ತಿರುವ ನೀರಿನ ಪ್ರಮಾಣವೂ ಕಡಿಮೆ ಆಗಿದೆ. ಕೃಷ್ಣಾ ನದಿ ಒಳಹರಿವಿನಲ್ಲಿ ಸಾಕಷ್ಟು ಇಳಿಕೆಯಾಗಿದ್ದು ಚಿಕ್ಕೋಡಿ ಉಪವಿಭಾಗದ ಪಂಚನದಿಗಳ ನದಿ ನೀರಿನಿಂದ ಜಲಾವೃತವಾಗಿದ್ದ 11 ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.
ತಗ್ಗಿದ ಮಳೆ ಪ್ರಮಾಣ: ಚಿಕ್ಕೋಡಿ ಉಪವಿಭಾಗದ ಎಲ್ಲ ಸೇತುವೆಗಳು ಸಂಚಾರಕ್ಕೆ ಮುಕ್ತ - rain latest news
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿದ್ದ ಮಳೆಯ ಪ್ರಮಾಣ ಕಡಿಮೆ ಆಗಿದ್ದರಿಂದ ವಿವಿಧ ಜಲಾಶಯಗಳಿಂದ ಬಿಡುಗಡೆಯಾಗುತ್ತಿರುವ ನೀರಿನ ಪ್ರಮಾಣವೂ ಕಡಿಮೆ ಆಗಿದೆ. ಇದರಿಂದ ಜಲಾವೃತಗೊಂಡಿದ್ದ ಎಲ್ಲ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.
ಕಲ್ಲೋಳ ಯಡೂರ ಸೇತುವೆ
ವೇದಗಂಗಾ ನದಿಗೆ ಅಡ್ಡಲಾಗಿರುವ ಭೋಜ - ಹುನ್ನರಗಿ, ಭೋಜಬಾಡಿ - ಕೊನ್ನೂರ, ಸಿದ್ನಾಳ - ಅಕೋಳ ಮತ್ತು ಭೀಮಸಿ - ಜತ್ರಾಟ, ದೂಧಗಂಗಾ ನದಿಗೆ ಅಡ್ಡಲಾಗಿರುವ ಕಾರದಗಾ - ಭೋಜ, ಯಕ್ಸಂಬಾ - ದನವಾಡ, ಸದಲಗಾ - ಬೋರಗಾಂವ, ದತ್ತವಾಡ - ಮಲಿಕವಾಡ ಸಂಚಾರಕ್ಕೆ ಮುಕ್ತಗೊಂಡಿವೆ.
ಕೃಷ್ಣಾ ನದಿಗೆ ಅಡ್ಡಲಾಗಿರುವ ಕುಡಚಿ - ಉಗಾರ ಅಂತಾರಾಜ್ಯ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಇಂದು ಯಡೂರ - ಕಲ್ಲೋಳ ಬ್ಯಾರೇಜ್ ಕೂಡಾ ಸಂಚಾರಕ್ಕೆ ಮುಕ್ತವಾಗಿದೆ.
Last Updated : Aug 28, 2020, 10:27 PM IST