ಕರ್ನಾಟಕ

karnataka

ETV Bharat / state

ಬೆಳಗಾವಿ: ಶ್ರೀಕೃಷ್ಣ ಜನ್ಮಾಷ್ಠಮಿಯಲ್ಲಿ ಡಾ.ರಾಜ್‌ ಮೊಮ್ಮಗಳು ಭಾಗಿ

ಬೆಳಗಾವಿಯಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ವರನಟ ಡಾ.ರಾಜ್‌ಕುಮಾರ್​ ಅವರ ಮೊಮ್ಮಗಳಾದ ಸರಸ್ವತಿ ಭಾಗಿಯಾಗಿ ಗಮನ ಸೆಳೆದರು.

ಶ್ರೀಕೃಷ್ಣ ಜನ್ಮಾಷ್ಠಮಿಯಲ್ಲಿ ನಟ ರಾಜಕುಮಾರ್​ ಮೊಮ್ಮಗಳು ಭಾಗಿ
ಶ್ರೀಕೃಷ್ಣ ಜನ್ಮಾಷ್ಠಮಿಯಲ್ಲಿ ನಟ ರಾಜಕುಮಾರ್​ ಮೊಮ್ಮಗಳು ಭಾಗಿ

By ETV Bharat Karnataka Team

Published : Sep 8, 2023, 10:48 AM IST

Updated : Sep 8, 2023, 3:14 PM IST

ಶ್ರೀಕೃಷ್ಣ ಜನ್ಮಾಷ್ಠಮಿಯಲ್ಲಿ ಡಾ.ರಾಜ್‌ ಮೊಮ್ಮಗಳು ಭಾಗಿ

ಬೆಳಗಾವಿ :ಇಲ್ಲಿನ ವೈಭವ ನಗರದ ರೂಪಾಲಿ ಹೊಸಕೋಟಿ ಎಂಬವರ ಮನೆಯಲ್ಲಿ ಗುರುವಾರ ಶ್ರೀಕೃಷ್ಣಜನ್ಮಾಷ್ಠಮಿ ನಿಮಿತ್ತ ವಿಶೇಷ ಪೂಜೆ ನಡೆಯಿತು. ಈ ಕಾರ್ಯಕ್ರಮಕ್ಕೆ ಬೆಳಗಾವಿಯ ಶಿವಬಸವ ನಗರದಲ್ಲಿ ನೆಲೆಸಿರುವ ಡಾ.ರಾಜ್‌ಕುಮಾರ್ ಮಗಳು‌ ಲಕ್ಷ್ಮಿ ಮತ್ತು ಗೋವಿಂದರಾಜ ದಂಪತಿಯ ಪುತ್ರಿ ಸರಸ್ವತಿ ಆಗಮಿಸಿದ್ದು ವಿಶೇಷವಾಗಿತ್ತು.

ಸರಸ್ವತಿ ಹಾಡು ಹಾಡಿ, ಶ್ರೀಕೃಷ್ಣನ ನೆನೆದು, ಎಲ್ಲರೊಂದಿಗೂ ಬೆರೆತು ಖುಷಿಪಟ್ಟರು. ಮತ್ತೊಂದೆಡೆ ಪೂಜೆಗೆ ಆಗಮಿಸಿದ್ದ ಮಹಿಳೆಯರು ಸರಸ್ವತಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಹರ್ಷ ವ್ಯಕ್ತಪಡಿಸಿದರು‌. ಡಾ. ರಾಜ್‌ಕುಮಾರ ಮರಿ ಮೊಮ್ಮಗ ವರ್ಧಾನ್ ಕೂಡ ಇದ್ದರು. ಕಲಾವಿದ ಆಯುಷ ಹೊಸಕೋಟಿ ಶ್ರೀಕೃಷ್ಣನ ವೇಷದಲ್ಲಿ‌ ಮಿಂಚಿದರು.

ಈಟಿವಿ ಭಾರತ ಜೊತೆಗೆ ಮಾತನಾಡಿದ ಸರಸ್ವತಿ, "ರೂಪಾಲಿ ಅವರ ಮನೆಗೆ ಪೂಜೆಗೆ ಬಂದಿದ್ದು ಬಹಳ ಖುಷಿ ಕೊಟ್ಟಿತು. ಕಾರಂಜಿಮಠದ ಸ್ವಾಮೀಜಿ ಆಶೀರ್ವಚನ ಕೇಳುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಬೆಳಗಾವಿ ಎಂದರೆ ನನಗೆ ಮೊದಲಿನಿಂದಲೂ ತುಂಬಾ ಪ್ರೀತಿ. ಇಲ್ಲಿಯೇ ನಾವು ವಾಸವಾಗಿರೋದು ಇನ್ನೂ ಒಳ್ಳೆಯದೇ ಆಗಿದೆ.‌ ಜನರು ಕೂಡ ನಮ್ಮನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿದ್ದಾರೆ" ಎಂದರು.

ಡಾ.ರಾಜ್‌ಮಾರ್​ ಮೊಮ್ಮಗಳು ಸರಸ್ವತಿ

ರೂಪಾಲಿ ಮಾತನಾಡಿ, "ದೊಡ್ಮನೆ ಮೊಮ್ಮಗಳು ಸರಸ್ವತಿ ಮೇಡಂ ಅವರು ನಮ್ಮ ಮನೆಗೆ ಬಂದಿರುವುದು ನಮ್ಮ ಅದೃಷ್ಟ.‌ ಕೈ ಹಿಡಿದು ಪ್ರೀತಿಯಿಂದ ನಮ್ಮನ್ನು ಮಾತನಾಡಿಸುತ್ತಿದ್ದಾರೆ. ಏನು ಹೇಳಬೇಕು ಅಂತಾನೇ ಗೊತ್ತಾಗುತ್ತಿಲ್ಲ. ಸನಾತನ ಧರ್ಮದಲ್ಲಿ ಹುಟ್ಟಿ ನಮ್ಮ ಸಂಸ್ಕೃತಿ, ಹಬ್ಬ ಹರಿದಿನಗಳನ್ನು ಆಚರಿಸದೇ ಹೋದರೆ ಅದು ನಿಜಕ್ಕೂ ದೊಡ್ಡ ಅಪರಾಧ. ಹಾಗಾಗಿ ದೇಶದ ಸಂಸ್ಕೃತಿ ಉಳಿಸಲು ಎಲ್ಲರೂ ಇಂತಹ ಕಾರ್ಯಕ್ರಮಗಳನ್ನು ನಡೆಸಬೇಕು" ಎಂದು ಹೇಳಿದರು.

ಕಾರಂಜಿಮಠದ ಗುರುಶಿದ್ಧ ಸ್ವಾಮೀಜಿ ಮಾತನಾಡಿ, "ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಭಾರತ‌ ಅಷ್ಟೇ ಅಲ್ಲದೇ ವಿದೇಶಗಳಲ್ಲೂ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ.‌ ಶ್ರೀಕೃಷ್ಣನ ಸಂದೇಶಗಳನ್ನು ಪ್ರತಿಯೊಬ್ಬರ ಮನೆ-ಮನಗಳಿಗೆ ತಲುಪಿಸುವುದು ಇದರ ಉದ್ದೇಶ. ಪೂಜೆಯಲ್ಲಿ ರಾಜ್‌ಕುಮಾರ್ ಅವರ ಮೊಮ್ಮಗಳು ಕೂಡ ಪಾಲ್ಗೊಂಡಿದ್ದು ನಮಗೆ ಬಹಳ ಸಂತಸ ತಂದಿದೆ. ಈಗ ಅವರು ನಮ್ಮ ಬೆಳಗಾವಿಯವರೇ ಆಗಿದ್ದಾರೆ" ಎಂದು ಸಂತಸ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ ಮೊಸರು ಕುಡಿಕೆ ಒಡೆಯುವ ಸ್ಥರ್ಧೆ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವಿಶಿಷ್ಟವಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಿತು.‌ ತೋರವಿ ಹಕ್ಕಲದಲ್ಲಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಡಿಜೆ ಸಾಂಗ್ಸ್​ಗೆ ಕುಣಿಯುವ ಮೂಲಕ ಯುವಕ-ಯುವತಿಯರು‌ ಖುಷಿಪಟ್ಟರು.

ಇದನ್ನೂ ಓದಿ :ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ವೈಭವದ ತೆರೆ : ಅದ್ಧೂರಿಯಾಗಿ ನಡೆದ ಮುದ್ದುಕೃಷ್ಣನ ಲೀಲೋತ್ಸವ ವಿಟ್ಲಪಿಂಡಿ

Last Updated : Sep 8, 2023, 3:14 PM IST

ABOUT THE AUTHOR

...view details