ಚಿಕ್ಕೋಡಿ :ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ಕರಗಾಂವ ಮತಗಟ್ಟೆಯಲ್ಲಿ ಅಭ್ಯರ್ಥಿಗಳು ಹಾಗೂ ಮುಖಂಡರು ಬಂದು ಮತಪ್ರಚಾರ ಮಾಡಿದ್ದಾರೆನ್ನುವ ಆರೋಪ ಕೇಳಿ ಬಂದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರಗಾಂವ ಗ್ರಾಮ ಪಂಚಾಯತ್ನಲ್ಲಿ ಈ ಘಟನೆ ನಡೆದಿದೆ. ಮತಗಟ್ಟೆಯಲ್ಲಿ ನಿಂತು ಅಭ್ಯರ್ಥಿಗಳ ಪರ ಗ್ರಾಮದ ಮುಖಂಡರು ಪ್ರಚಾರ ಮಾಡಿದ್ದು, ಚುನಾವಣಾ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಸುಮ್ಮನೆ ಕುಳಿತಿದ್ದರೆನ್ನುವ ಆರೋಪ ಕೇಳಿ ಬಂದಿದೆ.