ಚಿಕ್ಕೋಡಿ: ಕೊರೊನಾ ಸೋಂಕಿನ ಹಿನ್ನೆಲೆ ಮಹಾರಾಷ್ಟ್ರದ ಕೊಲ್ಲಾಪುರದ ಸಿಪಿಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ 45 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಚಿಕ್ಕೋಡಿ: ಕೊರೊನಾ ಸೋಂಕಿತ ಮಹಿಳೆ ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಸಾವು - ಚಿಕ್ಕೋಡಿ ಕೊರೊನಾ ಸುದ್ದಿ
ಚಿಕ್ಕೋಡಿಯಲ್ಲಿ ಕೊರೊನಾ ವೈರಸ್ ವೇಗ ತೀವ್ರಗತಿಯಲ್ಲಿ ಸಾಗುತ್ತಿದ್ದು, ಸೋಂಕಿನ ಹಿನ್ನೆಲೆ ಮಹಾರಾಷ್ಟ್ರದ ಕೊಲ್ಲಾಪುರದ ಸಿಪಿಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ ಮಹಿಳೆಯೊಬ್ಬರು (45) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಾಂಗೂರ ಗ್ರಾಮದ ಮಹಿಳೆ ಜು. 5ರಂದು ನ್ಯಮೋನಿಯಾ ಸಲುವಾಗಿ ಪಕ್ಕದ ರಾಜ್ಯ ಮಹಾರಾಷ್ಟ್ರದ ಕೊಲ್ಲಾಪುರ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಕೊರೊನಾದಿಂದ ಸಾವನಪ್ಪಿದ್ದು, ಈ ಮಹಿಳೆ ಜೊತೆಗಿದ್ದ ಇಬ್ಬರನ್ನು ಮಹಾರಾಷ್ಟ್ರದಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಕೊಣ್ಣೂರು ಪಟ್ಟಣ ಸೀಲ್ ಡೌನ್: ಮಹಾಮಾರಿ ಕೊರೊನಾಗೆ 55 ವರ್ಷ ವಯಸ್ಸಿನ ಮಹಿಳೆ ಮೃತಪಟ್ಟ ಹಿನ್ನೆಲೆ ಗೋಕಾಕ್ ತಾಲೂಕಿನ ಕೊಣ್ಣೂರ ಪಟ್ಟಣವನ್ನು ಸೀಲ್ ಡೌನ್ ಮಾಡಲಾಗಿದೆ. ಇಲ್ಲಿನ ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆ ಫಲಿಸದೆ ಮಹಿಳೆ ಮೃತಪಟ್ಟಿದ್ದರು. ಮೃತ ಸೋಂಕಿತೆ ಚಿಕಿತ್ಸೆ ಪಡೆದಿದ್ದ ಪಟ್ಟಣದ ಸಾಯಿ ಆಸ್ಪತ್ರೆಯನ್ನೂ ಸೀಲ್ ಡೌನ್ ಮಾಡಲಾಗಿದೆ. ಹಾಗೆಯೇ ನಗರದ ಗೋರೋಶಿ ಸ್ಕ್ಯಾನ್ ಮತ್ತು ಡಯಾಗ್ನಾಸ್ಟಿಕ್ ಸೆಂಟರ್ ಸಹ ಬಂದ್ ಮಾಡಲಾಗಿದೆ.