ಚಿಕ್ಕೋಡಿ: ಸರ್ಕಾರಿ ಶಾಲೆ ಮಕ್ಕಳನ್ನು ಕೂಲಿ ಕಾರ್ಮಿಕರಂತೆ ಬಳಕೆ ಮಾಡಿದ ಸಹಶಿಕ್ಷಕ ರಾಜು ಮಡಿವಾಳರನ್ನು ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ ಮೇಕನಮರಡಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಶಾಲಾ ಮಕ್ಕಳನ್ನು ಕೂಲಿ ಕಾರ್ಮಿಕರಂತೆ ಬಳಕೆ ಆರೋಪ... ಸಹಶಿಕ್ಷಕ ಅಮಾನತು! - chikodi news
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ರಾಮನಗರದಲ್ಲಿರುವ ಸರ್ಕಾರಿ ಶಾಲಾ ಮಕ್ಕಳನ್ನು ಕೂಲಿ ಕಾರ್ಮಿಕರಂತೆ ಬಳಕೆ ಮಾಡಿದ ಸಹಶಿಕ್ಷಕ ರಾಜು ಮಡಿವಾಳರನ್ನು ಅಮಾನತ್ತು ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ರಾಮ ನಗರದಲ್ಲಿರುವ ಸರ್ಕಾರಿ ಶಾಲಾ ಮಕ್ಕಳನ್ನು ಕೂಲಿ ಕಾರ್ಮಿಕರಂತೆ ಕೆಲಸ ಮಾಡಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಆಧಾರದ ಮೇಲೆ ವಿಚಾರಣೆಯನ್ನು ಕಾಯ್ದಿರಿಸಿ ಶಿಕ್ಷಕನನ್ನು ಅಮಾನತ್ತು ಮಾಡಲಾಗಿದೆ.
ಶಿಕ್ಷಕ ರಾಜು ಮಡಿವಾಳರ ಅವರ ವರ್ತನೆಯನ್ನು ಕರ್ಣಾಟಕ ನಾಗರಿಕ ಸೇವಾ ವರ್ಗಿಕರನ ನಿಯಂತ್ರಣ ಮತ್ತು ಅಪೀಲು ನಿಯಮಗಳು 1957ರ ನಿಯಮ 10(ಡಿ) ರ ಪ್ರಕಾರ ಪ್ರದತ್ತವಾದ ಅಧಿಕಾರ ಚಲಾಯಿಸಿ, ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಕರ್ನಾಟಕ ನಾಗರಿಕ ಸೇವಾ ವರ್ಗೀಕರನ ನಿಯಂತ್ರಣ ಮತ್ತು ಅಫಿಲು ನಿಯಮಗಳು 1957ರ ನಿಯಮ 10 (ಡಿ) ರ ಪ್ರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಟ್ಟು ಆದೇಶಿಸುತ್ತೆನೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ ಮೇಕನಮರಡಿ ಆದೇಶಿಸಿದ್ದಾರೆ.