ಚಿಕ್ಕೋಡಿ: ದ್ವಿಚಕ್ರ ವಾಹನ ಹಾಗೂ ಬೊಲೆರೋ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಯೋಧ ಸಾವನ್ನಪ್ಪಿದ್ದು, ಓರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನ ಸೌಂದತ್ತಿ ಹಾಗೂ ಅಂಕಲಿ ಗ್ರಾಮದ ಮಧ್ಯೆ ನಡೆದಿದೆ.
ದ್ವಿಚಕ್ರ ವಾಹನ, ಬೊಲೆರೋ ನಡುವೆ ಡಿಕ್ಕಿ: ಯೋಧ ಸಾವು..! - soldier death chikkodi news
ದ್ವಿಚಕ್ರ ವಾಹನ ಹಾಗೂ ಬೊಲೆರೋ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದ ಪರಿಣಾಮ ಬಾವನಸೌಂದತ್ತಿ ಗ್ರಾಮದ ಯೋಧನೊಬ್ಬ ಮೃತಪಟ್ಟಿದ್ದಾನೆ.
ಬಾವನಸೌಂದತ್ತಿ ಗ್ರಾಮದ ಯೋಧ ಅಜೀತ್ ಬಂಡು ಕೊರವಿ(28) ಮೃತ ವ್ಯಕ್ತಿಯಾಗಿದ್ದು, ಪ್ರದೀಪ್ ಕೊರವಿ ಎಂಬಾತ ಗಾಯಗೊಂಡಿದ್ದಾನೆ. ಇವರು ದ್ವಿಚಕ್ರ ವಾಹನದ ಮೇಲೆ ಬಾವನ ಸೌಂದತ್ತಿ ಗ್ರಾಮದಿಂದ ಅಂಕಲಿ ಗ್ರಾಮದ ಕಡೆ ಹೋಗುತ್ತಿದ್ದ ಸಂದರ್ಭದಲ್ಲಿ ಎರಡು ವಾಹನಗಳು ಮುಖಾಮುಕಿ ಡಿಕ್ಕಿಯಾಗಿದ್ದರಿಂದ ಈ ಅಪಘಾತ ಸಂಭವಿಸಿದೆ.
ಇನ್ನು ಯೋಧ ಅಜೀತ್ ಅವರು ರಜೆ ಮೇಲೆ ಗ್ರಾಮಕ್ಕೆ ಬಂದಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇನ್ನು ಬೊಲೆರೋ ವಾಹನ ವಶಪಡಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.