ಚಿಕ್ಕೋಡಿ: ಲಾರಿ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದ್ದು, ಏರ್ ಬ್ಯಾಗ್ ಇದ್ದಿದ್ದರಿಂದ ಕಾರು ಚಾಲಕ ಬದುಕುಳಿದಿದ್ದಾನೆ.
ಏರ್ ಬ್ಯಾಗ್‌ನಿಂದ ಉಳಿದ ಜೀವ: ನಿಟ್ಟುಸಿರು ಬಿಟ್ಟ ಕಾರು ಚಾಲಕ
ಲಾರಿ-ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾನೆ.
ಭೀಕರ ಅಪಘಾತ
ಚಲಿಸುತ್ತಿದ್ದ ಲಾರಿಗೆ ಕಾರು ಹಿಂದಿನಿಂದ ಜೋರಾಗಿ ಗುದ್ದಿದ್ದರಿಂದ ಕಾರಿನ ಮುಂಭಾಗ ನಜ್ಜುಗುಜ್ಜಾಗಿರುವ ಘಟನೆ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕಾರು ಚಾಲಕನಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಗಾಯಾಳು ಚಾಲಕ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ನಿವಾಸಿ ಎಂದು ತಿಳಿದು ಬಂದಿದೆ. ಕೊಲ್ಲಾಪುರಕ್ಕೆ ಹೊರಟಿದ್ದ ಕಾರು ಲಾರಿಗೆ ಹಿಂದಿನಿಂದ ಜೋರಾಗಿ ಗುದ್ದಿದೆ. ನಂತರ ಕಾರಿನ ಏರ್ ಬ್ಯಾಗ್ ತೆರೆದುಕೊಂಡ ಪರಿಣಾಮ ಅನಾಹುತ ತಪ್ಪಿದೆ.
ಇನ್ನು ಕಾರಿನ ಮುಂಭಾಗ ಸಂಪೂರ್ಣ ಹಾಳಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.