ಚಿಕ್ಕೋಡಿ (ಬೆಳಗಾವಿ):ಕುಡಚಿಯಲ್ಲಿ ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಡಚಿ ಪೋಲಿಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಪ್ರಕರಣ: ಐವರ ಬಂಧನ
ಕುಡಚಿಯಲ್ಲಿ ಆಶಾ ಕಾರ್ಯಕರ್ತೆಯರು ಸರ್ವೆ ಕಾರ್ಯಕ್ಕೆ ಹೋದಾಗ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಪ್ರಕರಣ ಐವರ ಬಂಧನ
ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಅಬ್ದುಲ್‌ಖಾದರ್ ರೋಹಿಲೆ(41), ಅತ್ತಾವುಲ್ ಕಮಲಖಾನ್ (26), ಆಸೀಫ್ ಪಾಶ್ಚಾಪೂರೆ (32), ಶಿರಾಜುದ್ದೀನ್ ಬಸ್ತಿ (50), ಮುಜಮ್ಮಿಲ್ ಬಸ್ತಿ (25) ಬಂಧನಕ್ಕೊಳಗಾದವರು.
ಆಶಾ ಕಾರ್ಯಕರ್ತೆಯರು ಸರ್ವೆ ಕಾರ್ಯಕ್ಕೆ ಹೋದಾಗ ಆರೋಪಿತರು ಹಲ್ಲೆ ನಡೆಸಿದ್ದರು. ಇದೀಗ ಐವರ ಮೇಲೆ ಐಪಿಸಿ 143, 147, 323, 353, 354 (ಬಿ), 188,109 ಅಡಿ ಪ್ರಕರಣ ದಾಖಲಾಗಿದೆ.