ಬೆಳಗಾವಿ:ಮಹಾಮಾರಿ ಕೊರೊನಾ ಬೆಳಗಾವಿಯ ಹಿಂಡಲಗಾ ಜೈಲಿಗೂ ಲಗ್ಗೆ ಇಟ್ಟಿದ್ದು, 11 ಕೈದಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಹಿಂಡಲಗಾ ಜೈಲಿನ 11 ಕೈದಿಗಳಿಗೆ ಕೊರೊನಾ ಸೋಂಕು ದೃಢ
ಹಿಂಡಲಗಾ ಜೈಲಿಗೆ ಹೊಸದಾಗಿ ಹೋಗುವ ಕೈದಿಗಳಿಗೆ ಕ್ವಾರಂಟೈನ್ ಆಗಲು ಜೈಲಿನಲ್ಲಿ 10 ಸೆಲ್ಗಳನ್ನು ಕಾಯ್ದಿರಿಸಲಾಗಿತ್ತು. ಆದರೂ ಜೈಲಿನ 11 ಕೈದಿಗಳಿಗೆ ಕೊರೊನಾ ಸೋಂಕು ವಕ್ಕರಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಸೋಂಕು ದೃಢಪಟ್ಟ 11 ಕೈದಿಗಳನ್ನು ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ಗೆ ಸ್ಥಳಾಂತರಿಸಿ ಚಿಕಿತ್ಸೆ ಮುಂದುವರೆಸಲಾಗಿದೆ. ಹಿಂಡಲಗಾ ಜೈಲಿನಲ್ಲಿ ಸದ್ಯ 800ಕ್ಕೂ ಅಧಿಕ ಕೈದಿಗಳಿದ್ದು, ಎಲ್ಲರೂ ಕೊರೊನಾ ಭೀತಿಯಲ್ಲಿದ್ದಾರೆ.
ಕೈದಿಗಳಿಗೆ ಸೋಂಕು ಹೇಗೆ ತಗುಲಿದೆ ಎಂಬುದರ ಕುರಿತು ಮಾಹಿತಿ ತಿಳಿದುಬಂದಿಲ್ಲ. ಹೊಸದಾಗಿ ಜೈಲಿಗೆ ಹೋಗುವ ಕೈದಿಗಳಿಗೆ ಕ್ವಾರಂಟೈನ್ ಆಗಲು ಜೈಲಿನಲ್ಲಿ 10 ಸೆಲ್ಗಳನ್ನು ಕಾಯ್ದಿರಿಸಲಾಗಿತ್ತು. ಆದರೂ ಜೈಲಿನ 11 ಕೈದಿಗಳಿಗೆ ಕೊರೊನಾ ಸೋಂಕು ವಕ್ಕರಿಸಿದ್ದು, ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಸೋಂಕು ಪ್ರಕರಣಗಳಿಂದ ಹಿಂಡಲಗಾ ಗ್ರಾಮದ ಜನತೆಯಲ್ಲಿಯೂ ಆತಂಕದ ವಾತಾವರಣ ಸೃಷ್ಟಿಯಾಗಿದೆ.