ಕರ್ನಾಟಕ

karnataka

ETV Bharat / state

ಪುಣೆಯಿಂದ ಬೆಳಗಾವಿ ವಿಭಾಗ ಮಟ್ಟಕ್ಕೆ ಕೋವಿಶೀಲ್ಡ್ ಲಸಿಕೆ ಆಗಮನ: ಆರತಿ ಬೆಳಗಿ ಸ್ವಾಗತಿಸಿದ ಮಹಿಳಾ ಸಿಬ್ಬಂದಿ

ಮಹಾರಾಷ್ಟ್ರದ ಪುಣೆಯಿಂದ 13 ಬಾಕ್ಸ್ ಗಳಲ್ಲಿ 1.47 ಲಕ್ಷ ಕೋವಿಶೀಲ್ಡ್ ಲಸಿಕೆಗಳು ಆಗಮಿಸಿವೆ‌. ಅದನ್ನು ಎಂಟು ಜಿಲ್ಲೆಗಳಿಗೆ ಶಿಫ್ಟ್ ಮಾಡಲಾಗುವುದು. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 12 ಲಸಿಕಾ ಕೇಂದ್ರಗಳನ್ನು ತೆರೆದು ಲಸಿಕೆ ನೀಡಲಾಗುತ್ತಿದ್ದು, ಒಟ್ಟು 180 ಕೇಂದ್ರಗಳಲ್ಲಿ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

1.47 lakh Covi Shield Vaccine from Pune to Belgaum Division level
ಪುಣೆಯಿಂದ ಬೆಳಗಾವಿ ವಿಭಾಗ ಮಟ್ಟಕ್ಕೆ 1.47 ಲಕ್ಷ ಕೋವಿಶೀಲ್ಡ್ ಲಸಿಕೆ

By

Published : Jan 13, 2021, 9:16 AM IST

Updated : Jan 13, 2021, 10:13 AM IST

ಬೆಳಗಾವಿ:ಮಹಾರಾಷ್ಟ್ರದ ಪುಣೆಯಿಂದ ಬೆಳಗಾವಿ ವಿಭಾಗ ಮಟ್ಟಕ್ಕೆ 1.47 ಲಕ್ಷ ಕೋವಿಶೀಲ್ಡ್ ಲಸಿಕೆಗಳು ಆರೋಗ್ಯ ಇಲಾಖೆಗೆ ಕೈಸೇರಿವೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.

ಪುಣೆಯಿಂದ ಬೆಳಗಾವಿ ವಿಭಾಗ ಮಟ್ಟಕ್ಕೆ ಕೋವಿಶೀಲ್ಡ್ ಲಸಿಕೆ ಆಗಮನ

ಇಲ್ಲಿನ‌ ಟಿಳಕವಾಡಿ ವ್ಯಾಕ್ಸಿನ್ ಡಿಪೋಕ್ಕೆ ಕೊರೊನಾ ಲಸಿಕೆ ಆಗಮನದ ಹಿನ್ನೆಲೆ ವ್ಯಾಕ್ಸಿನ್ ಡಿಪೋದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಜಾಂಜ್​ ಮೇಳ ತಂಡವನ್ನು ಕರೆಯಿಸಿ ಆರೋಗ್ಯ ಇಲಾಖೆ ಸಿಬ್ಬಂದಿ ಸಂಭ್ರಮಾಚರಣೆ ಮಾಡಿದರು. ಇದಕ್ಕೂ ಮುನ್ನ ರೆಫ್ರಿಜರೇಟರ್ ವ್ಯಾನ್‌‌ಗೆ ಮಹಿಳಾ ಸಿಬ್ಬಂದಿ ವಿಶೇಷ ಪೂಜೆ ಸಲ್ಲಿಸಿದರು. ವ್ಯಾಕ್ಸಿನ್ ಹೊತ್ತು ಬಂದು ವ್ಯಾನ್‌ಗೆ ಹಾರ ಹಾಕಿ ಆರತಿ ಬೆಳಗಿ ಪೂಜೆ ಸಲ್ಲಿಕೆ ಮಾಡಿಲಾಯಿತು. ಬಳಿಕ ವ್ಯಾನ್‌ನಲ್ಲಿದ್ದ 12 ಬಾಕ್ಸ್‌ಗಳಲ್ಲಿನ ಲಸಿಕೆಗಳನ್ನು ವಾಕ್ ಇನ್ ಕೂಲರ್‌ಗೆ ಶಿಫ್ಟ್ ಮಾಡಲಾಯಿತು.

ಈ ವೇಳೆ, ಮಾಧ್ಯಮದವರಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಮಹಾರಾಷ್ಟ್ರದ ಪುಣೆಯಿಂದ 13 ಬಾಕ್ಸ್ ಗಳಲ್ಲಿ 1.47 ಲಕ್ಷ ಕೋವಿಶೀಲ್ಡ್ ಲಸಿಕೆಗಳು ಆಗಮಿಸಿವೆ‌. ಅದನ್ನು ಎಂಟು ಜಿಲ್ಲೆಗಳಿಗೆ ಶಿಫ್ಟ್ ಮಾಡಲಾಗುವುದು. ಜಿಲ್ಲೆಯ ಮೊದಲ ಹಂತದಲ್ಲಿ 12 ಲಸಿಕಾ ಕೇಂದ್ರಗಳನ್ನು ತೆರೆದು ಲಸಿಕೆ ನೀಡಲಾಗುತ್ತಿದ್ದು, ಒಟ್ಟು 180 ಕೇಂದ್ರಗಳಲ್ಲಿ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಓದಿ : ಬೆಳಗಾವಿಗೆ ಬಂತು ಕೋವಿಶೀಲ್ಡ್; ತಡವಾಗಿ ಡಿಪೋಗೆ ಆಗಮಿಸಿದ ಡಿಸಿ

ಜ.16 ರಿಂದ ಲಸಿಕೆ ಹಾಕುವ ಕಾರ್ಯಕ್ರಮ ಪ್ರಾರಂಭಿಸಲಾಗುವುದು. ಇನ್ನು ಬೆಳಗಾವಿಗೆ ಅಷ್ಟೇ ಪ್ರತ್ಯೇಕವಾಗಿ 37 ಸಾವಿರ ಲಸಿಕೆಗಳು ಬಂದಿವೆ. ನಾವು ಕೂಡ 37 ಸಾವಿರ ಲಸಿಕೆ ಬೇಡಿಕೆಯ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ 37 ಸಾವಿರ ಲಸಿಕೆಗಳು ಕೊಟ್ಟಿದ್ದಾರೆ. ಈ ಮೊದಲು 28 ಸಾವಿರ ಆರೋಗ್ಯ ಇಲಾಖೆ ಸಿಬ್ಬಂದಿ ನೋಂದಾವಣೆ ಮಾಡಿಕೊಳ್ಳಲಾಗಿತ್ತು. ಬಳಿಕ 37 ಸಾವಿರ ಜನರು ನೋಂದಾವಣೆ ಮಾಡಿಕೊಂಡಿದ್ದಾರೆ. ಸರ್ಕಾರದ ನಿರ್ದೇಶನದಂತೆ ಉಳಿದ ಏಳು ಜಿಲ್ಲೆಗಳಿಗೆ ಇಲ್ಲಿಂದಲೇ ಕಳುಹಿಸಲಾಗುತ್ತದೆ ಎಂದರು.

Last Updated : Jan 13, 2021, 10:13 AM IST

ABOUT THE AUTHOR

...view details