ಕರ್ನಾಟಕ

karnataka

ETV Bharat / state

ಬಂದಿದೆ ಮನೆಯಲ್ಲೇ ಕುಳಿತು ಪ್ರವಾಸಿ ತಾಣಗಳ ಮಾಹಿತಿ ಆಲಿಸುವ ವ್ಯವಸ್ಥೆ - ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ

ಮನೆಯಲ್ಲಿಯೇ ಕುಳಿತು ಬೇಜಾರಾಗಿದೆಯೇ? ನಿಮ್ಮ ಬೇಜಾರು ದೂರ ಮಾಡಲು ಇಲ್ಲಿದೆ ಒಂದು ಸುವರ್ಣ ಅವಕಾಶ. ಇದರಿಂದ ನಿಮ್ಮ ಜ್ಞಾನವೂ ವೃದ್ಧಿಯಾಗಬಹುದು, ಹಾಗಾದರೆ ಇಷ್ಟು ಮಾಡಿದರೆ ಸಾಕು..!

You can sit at home and get information on tourist destinations through AAP
ಮನೆಯಲ್ಲೆ ಕುಳಿತು ಪ್ರವಾಸಿ ತಾಣಗಳ ಮಾಹಿತಿ ಆಲಿಸುವ ವ್ಯವಸ್ಥೆ

By

Published : Apr 30, 2020, 9:49 PM IST

ಬೆಂಗಳೂರು: ಲಾಕ್​ಡೌನ್ ನಡುವೆಯೂ, ನಿಮ್ಮ ಮನೆಯಲ್ಲೇ ಕುಳಿತು ಪ್ರವಾಸಿ ತಾಣಗಳ ಬಗೆಗಿನ ಮಾಹಿತಿಗಳನ್ನು ಆಲಿಸುವ ವ್ಯವಸ್ಥೆಯನ್ನು ಹೈವೇ ಡಿಲೈಟ್ ಸಂಸ್ಥೆ ಆರಂಭಿಸಿದೆ.

ಭಾರತದಾದ್ಯಂತ 60,000ಕ್ಕೂ ಅಧಿಕ ಕಿಲೋ ಮೀಟರ್ ದೂರದ ಹೆದ್ದಾರಿಗಳಲ್ಲಿನ ತಂಗುದಾಣಗಳು/ನಿಲುಗಡೆ ಪ್ರದೇಶಗಳು ಹಾಗೂ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸುವ ತಂತ್ರಜ್ಞಾನ ಆಧರಿತ, ಪ್ರವಾಸಿ ಸಂಬಂಧಿ ಸ್ಮಾರ್ಟ್‌ಅಪ್‌ ಹೈವೇ ಡಿಲೈಟ್, ಕರ್ನಾಟಕ ಹಾಗೂ ತಮಿಳುನಾಡಿನ 35ಕ್ಕೂ ಹೆಚ್ಚು ಪ್ರಖ್ಯಾತ ದೇವಾಲಯಗಳು ಹಾಗೂ ಐತಿಹಾಸಿಕ ಸ್ಥಳಗಳ ಬಗ್ಗೆ ಧ್ವನಿ ಮುದ್ರಿತ ಮಾರ್ಗದರ್ಶನ ಸೇವೆ ಆರಂಭಿಸಿದೆ.

ಮನೆಯಲ್ಲೆ ಕುಳಿತು ಪ್ರವಾಸಿ ತಾಣಗಳ ಮಾಹಿತಿ ಆಲಿಸುವ ವ್ಯವಸ್ಥೆ

ಇದು ಹೈವೇ ಡಿಲೈಟ್ ಹಾಗೂ ಧ್ವನಿ ರೂಪದ ವಿಷಯ ಸೂಚಿ ಆಧರಿತ ಸ್ಟಾರ್ಟ್‌ಅಪ್, ಪಿನಾಕಿನ್ ಜೊತೆಗೂಡಿ ಕೈಗೊಂಡಿರುವ ಉಪಕ್ರಮ. ಎರಡೂ ಸ್ಟಾರ್ಟ್‌ಅಪ್‌ಗಳು ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಚಾಲೆಂಜ್ ಫಂಡೆಡ್ ಸ್ಟಾರ್ಟ್ ಅಪ್ ಪ್ರೋಗ್ರಾಂನ ನಿಮಿತ್ತ ಆರಂಭಿಸಿದ ಕಾರ್ಯ ಇದಾಗಿದೆ.

ಮನೆಯಲ್ಲೆ ಕುಳಿತು ಪ್ರವಾಸಿ ತಾಣಗಳ ಮಾಹಿತಿ ಆಲಿಸುವ ವ್ಯವಸ್ಥೆ

ಸದ್ಯದ ಲಾಕ್​ಡೌನ್​ ಪರಿಸ್ಥಿತಿ ಜನರನ್ನು ಮನೆಯಲ್ಲೇ ಕೂಡಿ ಹಾಕಿದ್ದು, ಇತಿಹಾಸದ ಬಗ್ಗೆ ಒಲವು ಹೊಂದಿರುವ ಜನರಿಗೆ ಈ ಸ್ಥಳಗಳ ಬಗೆಗಿನ ಶ್ರೀಮಂತ ಇತಿಹಾಸ ಹಾಗೂ ಸಂಬಂಧಿಸಿದ ಪುರಾಣಗಳು ಹಾಗೂ ಇನ್ನಿತರ ವಿಚಾರಗಳನ್ನು ತಿಳಿದುಕೊಳ್ಳುವ ಅವಕಾಶ ಒದಗಿಸಲು ಹೈವೇ ಡಿಲೈಟ್ ತಂಡ ಯೋಚಿಸಿತು. ಪ್ರತಿಯೊಂದು ಸ್ಥಳಗಳ ಬಗೆಗಿನ ಪ್ರಾಥಮಿಕ ಮಾಹಿತಿಯನ್ನು ಉಚಿತವಾಗಿ ತಿಳಿಯಬಹುದಾಗಿದ್ದು ಆ ಸ್ಥಳಗಳ ಬಗ್ಗೆ ಆಳವಾದ ಮಾಹಿತಿ ತಿಳಿಯಲು ಇಚ್ಚಿಸುವವರು, ವರ್ಷಕ್ಕೆ ಕೇವಲ 49 ರೂ. ಪಾವತಿಸುವ ಮೂಲಕ ಎಲ್ಲಾ 35ಕ್ಕೂ ಅಧಿಕ ಸ್ಥಳಗಳ ಬಗೆಗಿನ ಧ್ವನಿ ಮುದ್ರಣ ಕೇಳಬಹುದಾಗಿದೆ.

ಜನರು ಲಾಕ್‌ಡೌನ್ ಮುಗಿದ ನಂತರ ಆ ಸ್ಥಳಗಳಿಗೆ ಭೇಟಿ ನೀಡಿ ಖುದ್ದಾಗಿ ತಾವು ಕೇಳಿದ ವಿಚಾರಗಳನ್ನು ನೋಡಿ ತಿಳಿಯುವಂತೆ ಉತ್ತೇಜಿಸುವ ಉದ್ದೇಶದಿಂದ ಧ್ವನಿ ಮಾರ್ಗದರ್ಶಿಯ ಈ ಕ್ರಮ ಕೈಗೊಳ್ಳಲಾಗಿದೆ.

ಮನೆಯಲ್ಲೆ ಕುಳಿತು ಪ್ರವಾಸಿ ತಾಣಗಳ ಮಾಹಿತಿ ಆಲಿಸುವ ವ್ಯವಸ್ಥೆ

ಮೈಸೂರು ಅರಮನೆ, ಹಂಪಿ, ಐಹೊಳೆ, ಬಾದಾಮಿ, ಗೋಳಗುಮ್ಮಟ ಹಾಗೂ ಇನ್ನಿತರ ಅನೇಕ ಪ್ರದೇಶಗಳನ್ನೊಳಗೊಂಡಂತೆ, ಕರ್ನಾಟಕದ 17 ಕ್ಕೂ ಅಧಿಕ ಸ್ಥಳಗಳನ್ನು ಈ ಧ್ವನಿ ಮುದ್ರಣ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ. ಇದರೊಂದಿಗೆ ಮೀನಾಕ್ಷಿ ದೇವಾಲಯ, ಮಹಾಬಲಿಪುರ ಹಾಗೂ ಕಾಂಚಿಪುರಂ ದೇವಾಲಯ ಸೇರಿದಂತೆ ತಮಿಳುನಾಡಿನ 15ಕ್ಕೂ ಹೆಚ್ಚು ಸ್ಥಳಗಳ ಮಾಹಿತಿ ಇದರಲ್ಲಿದೆ. ಆಂಗ್ಲ, ಹಿಂದಿ, ಕನ್ನಡ ಹಾಗೂ ತಮಿಳು ಈ ನಾಲ್ಕೂ ಭಾಷೆಗಳಲ್ಲಿ ಈ ಧ್ವನಿ ಮುದ್ರಣ ವ್ಯವಸ್ಥೆ ಲಭ್ಯವಿದೆ. ಈ ಧ್ವನಿ ಮುದ್ರಣ ವ್ಯವಸ್ಥೆ, ಇತಿಹಾಸ, ಪುರಾಣ, ವಿಜ್ಞಾನ ಹಾಗೂ ವಾಸ್ತುಶಿಲ್ಪಗಳನ್ನು ಒಟ್ಟುಗೂಡಿಸಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರಿಗೂ ಅರ್ಥವಾಗುವಂತಹ ಸುಲಭ ಭಾಷೆಯಲ್ಲಿ ಮುದ್ರಿಸಲಾಗಿದೆ ಎಂದು ಹೈವೇ ಡಿಲೈಟ್‌ನ ಸಂಸ್ಥಾಪಕ ರಾಜೇಶ್ ಘಟನಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಪಿನಾಕಿನ್‌ನ ಸಂಸ್ಥಾಪಕ ಶ್ರೀಕಾಂತ್ ಅಯ್ಯರ್ ಪ್ರಕಾರ, "ಪ್ರತಿಯೊಂದು ದೇವಾಲಯ ಹಾಗೂ ಸ್ಮಾರಕಗಳು ಇತಿಹಾಸದ ಭಂಡಾರವಾಗಿದೆ ಜೊತೆಗೆ ನಮ್ಮ ಸಂಸ್ಕೃತಿ, ಪದ್ದತಿ, ಅದ್ಭುತವಾದ ವಾಸ್ತುಶಿಲ್ಪ ಹಾಗೂ ಅದರ ಸುತ್ತಲಿನ ಅನೇಕ ಕಥೆಗಳನ್ನೊಳಗೊಂಡಿವೆ. ಆದರೆ, ಇವೆಲ್ಲಾ ಕಾಲಗರ್ಭದಲ್ಲಿ ಹುದುಗಿ ಹೋಗುತ್ತಿವೆ. ಈ ಧ್ವನಿ ಮುದ್ರಣ ವ್ಯವಸ್ಥೆಯೊಂದಿಗೆ ಈ ಸ್ಥಳಗಳ ಬಗೆಗಿನ ಜನರ ಆಲೋಚನೆಯನ್ನು ಬದಲಿಸುವ ವಿಶ್ವಾಸ ನಮಗಿದೆ' ಎಂದಿದ್ದಾರೆ.

ಹೈವೇ ಡಿಲೈಟ್ ಆ್ಯಪ್​ ಅನ್ನು ಆಂಡ್ರಾಯ್ ಬಳಕೆದಾರರು ಪ್ಲೇ ಸ್ಟೋರ್‌ನಲ್ಲಿ ಹಾಗೂ ಐಒಎಸ್ ಬಳಕೆದಾರರು ಆ್ಯಪ್‌ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಮಾಹಿತಿಗಾಗಿ ರಾಜೇಶ್ - 99860 19068 ಸಂಪರ್ಕಿಸಬಹುದಾಗಿದೆ.

ABOUT THE AUTHOR

...view details