ಕರ್ನಾಟಕ

karnataka

ETV Bharat / state

ಸುರೇಶ್ ಅಂಗಡಿ ನಿಧನ ನನಗೆ ದಿಗ್ಭ್ರಮೆ ಉಂಟುಮಾಡಿದೆ: ಸಿಎಂ ಬೇಸರ - Minister Suresh angadi death news

ಅಭಿವೃದ್ಧಿ ಪರವಾದ ರಾಜಕಾರಣಿ ಒಬ್ಬರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸಿಎಂ ಯಡಿಯೂರಪ್ಪ ನವರು ಸುರೇಶ್ ಅಂಗಡಿ ನಿಧನಕ್ಕೆ ಬೇಸರ ವ್ಯಕ್ತಪಡಿಸಿದರು.

Cm
Cm

By

Published : Sep 24, 2020, 3:59 PM IST

ಬೆಂಗಳೂರು: ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನ ನನಗೆ ದಿಗ್ಭ್ರಮೆ ತಂದಿದೆ. ಅವರೊಬ್ಬ ಅಜಾತ ಶತ್ರು, ಒಬ್ಬ ಒಳ್ಳೆಯ ನಾಯಕನನ್ನು ನಾಡು ಕಳೆದುಕೊಂಡಂತಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ಹೇಳಿದರು.

ತಿರುಪತಿ ಪ್ರವಾಸದಲ್ಲಿದ್ದ ಸಿಎಂ ಇಂದು ಬೆಳಗ್ಗೆ ನೇರವಾಗಿ ಸದನಕ್ಕೆ ಆಗಮಿಸಿ ಮಾತನಾಡಿದ ಅವರು, ಅಭಿವೃದ್ಧಿ ಪರವಾದ ರಾಜಕಾರಣಿ ಒಬ್ಬರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ರೈತ ಬೆಳೆ ಸಮೀಕ್ಷೆ ಆ್ಯಪ್ ಕಂಡು ಸಂತಸಪಟ್ಟಿದ್ದ ಸುರೇಶ್ ಅಂಗಡಿ ಅವರು, ಇತರೆ ರಾಜ್ಯಗಳಿಗೂ ಮಾದರಿಯಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಅವರನ್ನು ಸ್ಮರಿಸಿಕೊಂಡರು.

ಕರ್ನಾಟಕದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ದುಡಿಯುತ್ತಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ನಿಧನ ವೈಯಕ್ತಿಕವಾಗಿಯೂ ಹಾಗೂ ರಾಜ್ಯದ ಜನತೆಗೂ ಆಘಾತವನ್ನುಂಟು ಮಾಡಿದೆ.
ಕಳೆದ ತಿಂಗಳು 22 ರಂದು ದೆಹಲಿಗೆ ನಾನು ಭೇಟಿ ನೀಡಿದ್ದಾಗ ಸುರೇಶ್ ಅಂಗಡಿ ನನ್ನನ್ನು ಉಪಹಾರಕ್ಕೆ ಅವರ ನಿವಾಸಕ್ಕೆ ಆಹ್ವಾನಿಸಿ, ತಮ್ಮ ಸರಳ ಸಜ್ಜನಿಕೆ ಮೆರೆದಿದ್ದರು. ಜೊತೆಗೆ ರೈತರ ಬೆಳೆ ಸಮೀಕ್ಷೆ ವಿಡಿಯೋವನ್ನು ತಮ್ಮ ಪೆನ್ ಡ್ರೈವ್ ಲ್ಲಿ ಹಾಕಿಕೊಂಡು ಎಲ್ಲಾ ರಾಜ್ಯಗಳಿಗೂ ಇದು ಸ್ಫೂರ್ತಿಯಾಗಬೇಕು ಎಂದು ಸಂತಸ ವ್ಯಕ್ತಪಡಿಸಿದ್ದರು ಎಂದರು.

ಹುಬ್ಬಳ್ಳಿ-ಅಂಕೋಲಾ ರೈಲು ಸಂಪರ್ಕ ಹಾಗೂ ರಾಣೆಬೆನ್ನೂರು, ಬೈಂದೂರು ರೈಲು ಬ್ಯಾಡಗಿ ರಸ್ತೆ ಸಂಪರ್ಕ ಸಂಬಂಧ ತಮ್ಮೊಂದಿಗೆ ಚರ್ಚೆಯನ್ನು ಮಾಡಿದ್ದರು. ರಾಜ್ಯದ ಕೆಲಸ ಎಂದರೆ ಬಹಳ ಆಸಕ್ತಿ ಮತ್ತು ಶ್ರದ್ಧೆಯಿಂದ ಮಾಡುತ್ತಿದ್ದರು. ಇತ್ತೀಚೆಗೆ ಕಿಸಾನ್ ರೈಲನ್ನು ಇಡೀ ದೇಶಕ್ಕೆ ಪರಿಚಯಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಟ್ಟರು ಎಂದು ಬಿ.ಸಿ.ಪಾಟೀಲ್ ಹೇಳಿದರು.

ಕೊರೊನಾ ಸೋಂಕು ಎಲ್ಲರಲ್ಲೂ ಆತಂಕವನ್ನುಂಟು ಮಾಡಿದೆ. ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಬಗ್ಗೆ ನಿರ್ಲಕ್ಷ್ಯ ಭಾವ ಎದ್ದುಕಾಣುತ್ತಿದೆ. ಈ ನಿಟ್ಟಿನಲ್ಲಿ ಜನಜಾಗೃತಿ, ಸಾಮಾಜಿಕ ಅಂತರ ಹೆಚ್ಚಾಗಬೇಕು ಎಂದರು.

ಸುರೇಶ್ ಅಂಗಡಿ ಅವರ ಅಂತ್ಯಸಂಸ್ಕಾರಕ್ಕೆ ಹೋಗದ ದುಃಸ್ಥಿತಿಯನ್ನು ಕೊರೊನಾ ತಂದಿಟ್ಟಿದೆ. ಮೊದಲು ಬಂಧುಗಳಾಗಲಿ, ಸ್ನೇಹಿತರಾಗಲಿ ಆಸ್ಪತ್ರೆಗೆ ದಾಖಲಾಗಿದ್ದ ಸುದ್ದಿ ತಿಳಿಯುತ್ತಿದ್ದಂತೆ ಅವರ ಯೋಗಕ್ಷೇಮ ವಿಚಾರಿಸಲು ಆಸ್ಪತ್ರೆಗೆ, ಮನೆಗೆ ಹೋಗುತ್ತಿದ್ದೆವು. ಆದರೆ ಕೊರೊನಾ ಇದೆಲ್ಲವನ್ನು ತಲೆಕೆಳಗೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details