ಕರ್ನಾಟಕ

karnataka

ETV Bharat / state

ನಾಯಕತ್ವ ಬದಲಾವಣೆ ವಿಚಾರ: ಸಿಎಂಗಿಂತ ನಾನೇನ್ ದೊಡ್ಡವನಾ ಎಂದ ರೇಣುಕಾಚಾರ್ಯ..!

ಯಾವುದೇ ಕಾರಣಕ್ಕೂ ನಾಯಕತ್ವ ಬದಲಾಗಲ್ಲ ಅಂತಾ ಸಿಎಂ ಅವರೇ ಹೇಳಿದ್ದಾರೆ. ನಾನು ಏನು ಹೇಳೋದು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.

ರೇಣುಕಾಚಾರ್ಯ
ರೇಣುಕಾಚಾರ್ಯ

By

Published : Jul 20, 2021, 2:13 PM IST

ಬೆಂಗಳೂರು: ನಾಯಕತ್ವ ಬದಲಾವಣೆಯಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪನವರೇ ಹೇಳಿದ್ದಾರೆ. ಅವರೇ ಹೇಳಿದ ಮೇಲೆ ನಾನು ಏನು ಹೇಳೋದು, ಅವರಿಂತ ನಾನೇನು ದೊಡ್ಡವನಾ? ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದಾರೆ.

ಸರ್ಕಾರಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಸಿಎಂ ಮನೆಗೆ ಹೋಗುತ್ತಿದ್ದೇನೆ. ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸೋದು ಯಾಕೆ? ಎಂದು ನಾಯಕತ್ವ ಬದಲಾವಣೆ ಕುರಿತ ವಿಷಯದ ಚರ್ಚೆ ಅನಗತ್ಯ ಎಂದರು.

ಯಡಿಯೂರಪ್ಪ ಮಾಸ್ ಲೀಡರ್

ಯಡಿಯೂರಪ್ಪ ಕೇವಲ ವೀರಶೈವರಿಗೆ ಮಾತ್ರ ನಾಯಕರಲ್ಲ. ಎಲ್ಲಾ ಸಮುದಾಯದಕ್ಕೂ ಲೀಡರ್. ವೀರಶೈವ ಲಿಂಗಾಯತ ಸಮಾಜದ ಮುಖಂಡರಾಗಿ ಶಾಮನೂರು ಶಿವಶಂಕರಪ್ಪನವರು ಮಾತಾಡಿದ್ದಾರೆ. ಈ ಹಿಂದೆ ಬಿಎಸ್​ವೈಗೆ ದೇವೇಗೌಡರು, ಕುಮಾರಸ್ವಾಮಿ ಮೋಸ ಮಾಡಿದಾಗ ಎಲ್ಲಾ ಸಮುದಾಯದವರು ಬೆಂಬಲ ನೀಡಿದ್ದರು ಎಂದು ರೇಣುಕಾಚಾರ್ಯ ಸ್ಮರಿಸಿದರು.

ಫೇಕ್ ಆಡಿಯೋ

ಕಟೀಲು ಅವರದ್ದು ಎನ್ನಲಾದ ಆಡಿಯೋ ಅವರದ್ದಲ್ಲ. ಕಟೀಲು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಯಾರೋ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಗಂಗೆಯಷ್ಟೇ ಪವಿತ್ರ

ನಮ್ಮದು ಟೀಂ ಇಲ್ಲ, ನಾವೆಲ್ಲ ಬಿಜೆಪಿಗರು. ಹಿಂದೊಮ್ಮೆ ಹಿಂದುತ್ವ ವಿಚಾರವಾಗಿ ಎರಡು ಬಾರಿ ಜೈಲಿಗೆ ಹೋಗಿದ್ದವನು. ನಾನು ಸಂಘಟನೆ ಮೂಲಕ ಬಿಜೆಪಿಗೆ ಬಂದವನು. ಗಂಗೆಯಷ್ಟೇ ಪವಿತ್ರವಾಗಿದ್ದೇನೆ ಎಂದು ತಮ್ಮನ್ನು ರೇಣುಕಾಚಾರ್ಯ ಸಮರ್ಥಿಸಿಕೊಂಡಿದ್ದಾರೆ.

ಸಹಿ ಸಂಗ್ರಹ ಅಭಿಯಾನ ಮಾಡಿಸಿದ್ದು ನಿಜ

ಈ ಹಿಂದೆ ಸಹಿ ಸಂಗ್ರಹ ಮಾಡಿಸಿದ್ದು ನಿಜ. ಎಲ್ಲರೂ ಸಹಿ ಹಾಕುತ್ತೇವೆ ಎಂದಿದ್ದರು. ಆದರೆ, ಅರುಣ್ ಸಿಂಗ್ ಜೊತೆ ಮಾತುಕತೆ ನಡೆಸಿದ ಮೇಲೆ ಸಹಿ ಸಂಗ್ರಹ ಅಭಿಯಾನ ನಿಲ್ಲಿಸಲಾಗಿತ್ತು. ಯಡಿಯೂರಪ್ಪ ಜೊತೆ ಎಲ್ಲಾ ಶಾಸಕರು, ಸಂಸದರು, ಪರಿಷತ್ ಸದಸ್ಯರು ಇದ್ದಾರೆ ಎಂದು ಸ್ಪಷ್ಟಪಡಿಸಿದ್ರು.

ಇದನ್ನೂ ಓದಿ:ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆಯಾಗಲ್ಲ : ಬಿಎಸ್​ವೈ ಪರ ಶಾಸಕ, ಸಚಿವರಿಂದ ಬ್ಯಾಟಿಂಗ್

ABOUT THE AUTHOR

...view details