ಕರ್ನಾಟಕ

karnataka

ETV Bharat / state

ತಮ್ಮ ಪಾಠ ಇಲ್ಲದಿದ್ದರೂ ಪಠ್ಯ ಕೈಬಿಡಿ ಎಂದು ಸರ್ಕಾರಕ್ಕೆ ಪತ್ರ ಬರೆದ ಸಾಹಿತಿಗಳು! - Karnataka syllabus issue

ಪಠ್ಯ ಕೈಬಿಡಿ ಎಂದು ಪತ್ರ ಬರೆಯುವ ಮುನ್ನವೇ 7 ಸಾಹಿತಿಗಳ ಪಠ್ಯವನ್ನು ರೋಹಿತ್ ಚಕ್ರತೀರ್ಥ ಸಮಿತಿ ಕೈ ಬಿಟ್ಟಿತ್ತು. ಪಠ್ಯ ವಾಪಸಿಗೆ ಪತ್ರ ಬರೆದ 11 ಜನರಲ್ಲಿ ಕೇವಲ ನಾಲ್ಕು ಸಾಹಿತಿಗಳ ಪಠ್ಯ ಮಾತ್ರ ಇದೆ. ಉಳಿದ ಏಳು ಮಂದಿಯ ಪಠ್ಯಗಳೇ ಇಲ್ಲದಿದ್ರೂ‌ ಪಠ್ಯ ವಾಪಸಿಗೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ‌

writers wrote a letter to govt whose text is not in book
ಪಠ್ಯ ಇಲ್ಲದೇ ಇದ್ದರೂ ಪಠ್ಯ ಕೈಬಿಡಿ ಎಂದು ಪತ್ರ ಬರೆದ ಸಾಹಿತಿಗಳು

By

Published : Jun 2, 2022, 12:26 PM IST

ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ವಾದ-ವಿವಾದಗಳು ಜೋರಾಗಿಯೇ ಅಬ್ಬರಿಸುತ್ತಿವೆ.‌ ಶಿಕ್ಷಣ ಇಲಾಖೆ ವಿರುದ್ಧ ಸಾಹಿತಿಗಳ ಪಠ್ಯ ವಾಪಸಿ ಸಮರ ಶುರುವಾಗಿದ್ದು, ಸಾಹಿತಿಗಳು ಆತುರದ ನಡೆ ತೋರಿದ್ದಾರಾ ಎಂಬ ಪ್ರಶ್ನೆಯೂ ಎದ್ದಿದೆ. ಏಕೆಂದರೆ ತಮ್ಮ ಪಠ್ಯ ಪರಿಷ್ಕೃತ ಪುಸ್ತಕದಲ್ಲಿ ಇದೆಯಾ ಇಲ್ಲವಾ ಎಂಬುದನ್ನೂ ಕೂಡ ಖಚಿತ ಪಡಿಸಿಕೊಳ್ಳದೇ, ಇಲ್ಲದೇ ಇರುವ ಪಠ್ಯವನ್ನು ಕೈ ಬಿಡುವಂತೆ ಪತ್ರ ಬರೆದಿರುವ ಸಾಹಿತಿಗಳು ಇದೀಗ ಪೇಚಿಗೆ ಸಿಲುಕುವಂತಾಗಿದೆ.

ಪಠ್ಯ ಪಟ್ಟಿ

ಇತ್ತ ಪಠ್ಯ ಕೈಬಿಡಿ ಎಂದು ಪತ್ರ ಬರೆಯುವ ಮುನ್ನವೇ 7 ಸಾಹಿತಿಗಳ ಪಠ್ಯವನ್ನು ರೋಹಿತ್ ಚಕ್ರತೀರ್ಥ ಸಮಿತಿ ಕೈ ಬಿಟ್ಟಿತ್ತು.‌ ಈ ಹಿಂದೆ ಬರಗೂರು ಸಮಿತಿಯಲ್ಲಿ ಏಳು ಮಂದಿಯ ಸಾಹಿತಿಗಳ ಪಠ್ಯ ಇತ್ತು. ತಮ್ಮ ಪಠ್ಯ ಕೈ ಬಿಟ್ಟ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಮುನ್ನವೇ ಪಠ್ಯ ವಾಪಸಿ ಸಮರ ಸಾರಿದ್ದರು. ಸುಖಾಸುಮ್ಮನೆ ಪಠ್ಯ ವಾಪಸಿಗೆ ಪತ್ರ ಬರೆದು ಗೊಂದಲ ಸೃಷ್ಟಿಸಿದ್ರಾ ಸಾಹಿತಿಗಳು? ತಮ್ಮ ಪಠ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳದೇ ಸಾಲು ಸಾಲು ಪತ್ರ ಬರೆದು ಪಠ್ಯ ವಾಪಸಿಗೆ ಆಗ್ರಹಿಸಿದ್ದೇಕೆ? ಬಿಜೆಪಿಯ, ಕಾಂಗ್ರೆಸ್​ ಟೂಲ್ ಕಿಟ್ ಆರೋಪಕ್ಕೆ ಸಾಹಿತಿಗಳ ನಡವಳಿಕೆ ಪುಷ್ಟಿ ನೀಡುತ್ತಿದೆ.‌ ಪರಿಷ್ಕೃತ ಪಠ್ಯವನ್ನೇ ನೋಡದೇ ಪಠ್ಯ ವಾಪಸಿಗೆ ಮುಂದಾಗಿದ್ದೇಕೆ?ಎಂಬ ಪ್ರಶ್ನೆ ಉದ್ಭವಿಸಿದೆ.

ಪಠ್ಯ ಪಟ್ಟಿ

ಇದನ್ನೂ ಓದಿ:ಸಚಿವ ಬಿ.ಸಿ ನಾಗೇಶ್ ಮನೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ : ಸ್ಥಳಕ್ಕೆ ಐಜಿಪಿ ಭೇಟಿ, ಪರಿಶೀಲನೆ

ಪಠ್ಯ ವಾಪಸಿಗೆ ಪತ್ರ ಬರೆದ 11 ಜನರಲ್ಲಿ ಕೇವಲ ನಾಲ್ಕು ಸಾಹಿತಿಗಳ ಪಠ್ಯ ಮಾತ್ರ ಇದೆ. ದೇವನೂರು ಮಹಾದೇವ, ಜಿ.‌ ರಾಮಕೃಷ್ಣ, ಈರಪ್ಪ ಎಂ ಕಂಬಳಿ, ರೂಪಾ ಹಾಸನ ಇವರ ಪಠ್ಯಗಳು ಮಾತ್ರ ಪರಿಷ್ಕೃತ ಪಠ್ಯ ಪುಸ್ತಕದಲ್ಲಿವೆ. ಉಳಿದ ಏಳು ಮಂದಿಯ ಪಠ್ಯಗಳೇ ಇಲ್ಲದಿದ್ರೂ‌ ಪಠ್ಯ ವಾಪಸಿಗೆ ಪತ್ರ ಬರೆದಿದ್ದಾರೆ. ‌

ಪಠ್ಯ ಇಲ್ಲ.. ಪತ್ರ ಮಾತ್ರ:

1. ಮೂಡ್ನಾಕೂಡು ಚಿನ್ನಸ್ವಾಮಿ

2. ಬೊಳುವಾರು ಮಹಮದ್ ಕುಂಞಿ

3. ಚಂದ್ರಶೇಖರ ತಾಳ್ಯ

4. ಪಾರ್ವತೀಶ, ಬಿಳಿದಾಳೆ

5. ಡಾ. ಸರಜೂ ಕಾಟ್ಕರ್

6. ಡಾ. ಎಚ್ ಎಸ್ ಅನುಪಮಾ

7. ದು. ಸರಸ್ವತಿ

ABOUT THE AUTHOR

...view details