ಕರ್ನಾಟಕ

karnataka

ETV Bharat / state

ಬೆಂಗಳೂರು ಬಿಟ್ಟು ಹೊರಟಿದ್ದ 4,000 ಕಾರ್ಮಿಕರು ಮತ್ತೆ ಗೂಡಿಗೆ - banglore migrate workers

ಬೆಂಗಳೂರು ಬಿಟ್ಟು ಹೊರಹೋಗಲು ಮತ್ತು ತಮ್ಮ ಸ್ವಗ್ರಾಮಗಳಿಗೆ ವಾಪಸ್​ ಆಗಲು ಸಿದ್ದವಾಗಿದ್ದ ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದ ಸುಮಾರು 4 ಸಾವಿರ ಕಾರ್ಮಿಕರನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ನಿನ್ನೆ ವಶಕ್ಕೆ ತೆಗೆದುಕೊಂಡಿದ್ದರು.

ಕೊರೊನಾ ಭೀತಿ
ಕೊರೊನಾ ಭೀತಿ

By

Published : Mar 31, 2020, 6:21 PM IST

ಬೆಂಗಳೂರು : ಕೊರೊನಾ ಭೀತಿ ಮತ್ತು ಆಹಾರವಿಲ್ಲದೇ ಕಂಗಾಲಾಗಿ ಬೆಂಗಳೂರು ಬಿಟ್ಟು ಸ್ವಗ್ರಾಮಕ್ಕೆ ಹೊರಟಿದ್ದ ಕೂಲಿ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರನ್ನು ಕಳೆದ ರಾತ್ರಿ ಮತ್ತೆ ಅವರ ಜೋಪಡಿಗಳಿಗೆ ವಾಪಸ್​ ಕಳುಹಿಸಲಾಗಿದೆ.

ಬೆಂಗಳೂರು ಬಿಟ್ಟು ಹೊರಹೋಗಲು ಮತ್ತು ತಮ್ಮ ಸ್ವಗ್ರಾಮಗಳಿಗೆ ವಾಪಸ್ ಆಗಲು ಸಿದ್ದವಾಗಿದ್ದ ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದ ಸುಮಾರು 4 ಸಾವಿರ ಕಾರ್ಮಿಕರನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ನಿನ್ನೆ ವಶಕ್ಕೆ ತೆಗೆದುಕೊಂಡಿದ್ದರು. ನಂತರ ಈ ಎಲ್ಲ ಕಾರ್ಮಿಕರಿಗೆ ಆಶ್ರಯ ಕಲ್ಪಿಸಿ ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ಕೇಂದ್ರದಲ್ಲಿ ಇರಿಸಲಾಗಿತ್ತು.

ಕಾರ್ಮಿಕರು
ತಡ ರಾತ್ರಿ ಎಲ್ಲರಿಗೂ ಊಟೋಪಚಾರ ಕಲಿಸಿದ ಬಳಿಕ ಬಿಬಿಎಂಪಿ ಅಧಿಕಾರಿಗಳು ಮತ್ತು ಸಮಾಜ ಕಲ್ಯಾಣ ಅಧಿಕಾರಿಗಳು ಕೂಲಿ ಕಾರ್ಮಿಕರ ಜೊತೆ ಸಭೆ ನಡೆಸಿ ಅವರನ್ನು ಮತ್ತೆ ತಮ್ಮ ಜೋಪಡಿಗಳಿಗೆ ವಾಪಸ್​ ಆಗುವಂತೆ ಮನವೊಲಿಸಿದ್ದಾರೆ. ಸರ್ಕಾರದ ಆದೇಶದ ಪ್ರಕಾರ ಯಾರೊಬ್ಬರೂ ಬೆಂಗಳೂರು ಬಿಟ್ಟು ಹೊರ ಹೋಗುವಂತಿಲ್ಲ. ನಗರದಲ್ಲೇ ಇರುವುದಾದರೆ ಮತ್ತೆ ವಾಪಸ್​ ನಿಮ್ಮ ಜೋಪಡಿ ಮತ್ತು ಮನೆಗಳಿಗೆ ತೆರಳಿ. ಇಲ್ಲದಿದ್ದರೆ ಸರ್ಕಾರ ಕಲ್ಪಿಸಿರುವ ಇದೇ ಕೇಂದ್ರದಲ್ಲಿ ಉಳಿದುಕೊಳ್ಳಿ. ಆಯ್ಕೆ ನಿಮಗೆ ಬಿಟ್ಟದ್ದು ಎಂದು ತಿಳಿಸಿದ್ದಾರೆ. ನೀವು ಎಲ್ಲಿದ್ದರೂ ಆಹಾರ ಸೇರಿದಂತೆ ಅಗತ್ಯ ವಸ್ತುಗಳನ್ನು ಒದಗಿಸುತ್ತೇವೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ಕಾರ್ಮಿಕರು
ಸಭೆಯಲ್ಲಿ ಮಾಹಿತಿ ಪಡೆದುಕೊಂಡ ಕಾರ್ಮಿಕರು ಸರ್ಕಾರದ ನಿರಾಶ್ರಿತರ ಪುರನ್‌ವಸತಿ ಕೇಂದ್ರದಲ್ಲಿ ಉಳಿದುಕೊಳ್ಳಲು ಇಚ್ಚಿಸದೇ ತಮ್ಮ ಮನೆ, ಬಿಡಾರಗಳಿಗೆ ವಾಪಸ್​ ಹೋಗುವುದಾಗಿ ತಿಳಿಸಿದ್ದಾರೆ. ಅದರಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಗುಳೆ ಹೊರಟಿದ್ದ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸಿ ಎಲ್ಲರನ್ನೂ ಅವರವರ ಮನೆ - ಬಿಡಾರಗಳಿಗೆ ವಾಪಸ್​ ಕಳುಹಿಸಿಕೊಟ್ಟಿದ್ದಾರೆ. ಅವರು ವಾಸಿಸುತ್ತಿದ್ದ ನಗರದ ಕೆ.ಆರ್ ಪುರ, ಟಿನ್ ಫ್ಯಾಕ್ಟರಿ, ಜಯನಗರ, ಯಲಹಂಕ ಮತ್ತು ಗಂಗಮ್ಮನ ಗುಡಿಯಲ್ಲಿರುವ ನಿವಾಸಗಳಿಗೆ ಕಾರ್ಮಿಕರನ್ನು ತಲುಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿ ಲಕ್ಷ್ಮಣ್‌ ರೆಡ್ಡಿ ಅವರು ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

ABOUT THE AUTHOR

...view details