ಬೆಂಗಳೂರು:ಗರ್ಭಪಾತದ ಮಾತ್ರೆ ನುಂಗಿದ ಪರಿಣಾಮ ಗರ್ಭಿಣಿ ಪ್ರಾಣ ಕಳೆದುಕೊಂಡಿದ್ದಾಳೆ. ಅಬಾರ್ಶನ್ ಮಾತ್ರೆ ಸೇವಿಸಿದ ಬಳಿಕ ಉಂಟಾದ ರಕ್ತಸ್ರಾವ ಹಾಗೂ ನೋವಿನಿಂದ ಮಹಿಳೆ ಮೃತಪಟ್ಟ ಘಟನೆ ನಗರದ ಬೇಗೂರು ಠಾಣಾ ವ್ಯಾಪ್ತಿಯ ನ್ಯೂ ಮೈಕೋ ಲೇಔಟ್ನಲ್ಲಿ ನಡೆದಿದೆ.
ಪ್ರೀತಿ ಕುಶ್ವಾಸ್ ಎಂಬಾಕೆಯೆ ಸಾವನ್ನಪ್ಪಿದ ಮಹಿಳೆ. 2016ರಲ್ಲಿ ದೇವಬ್ರತ್ ಜೊತೆ ಪ್ರೀತಿಯ ವಿವಾಹವಾಗಿತ್ತು. ಖಾಸಗಿ ಕಂಪನಿಯಲ್ಲಿ ಗಂಡ ಕೆಲಸ ಮಾಡುತ್ತಿದ್ದರೆ, ಹೆಂಡತಿ ಗೃಹಿಣಿಯಾಗಿದ್ದಳು. ದಂಪತಿಗೆ 11 ತಿಂಗಳಿನ ಗಂಡು ಮಗುವಿದೆ. ಈ ನಡುವೆ ಪ್ರೀತಿ ಮತ್ತೆ ಗರ್ಭ ಧರಿಸಿದ್ದರು. ಚಿಕ್ಕ ಮಗುವಿದ್ದು, ಈಗಲೇ ಮತ್ತೊಂದು ಮಗು ಬೇಡವೆಂದು ಅಬಾರ್ಶನ್ ಮಾತ್ರೆ ಸೇವಿಸುವುದಾಗಿ ಹೇಳಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಗಂಡ ಮಾತ್ರೆ ಬೇಡ, ಆಸ್ಪತ್ರೆಗೆ ಹೋಗೋಣ ಎಂದು ಹೇಳಿದ್ದರಂತೆ.