ಕರ್ನಾಟಕ

karnataka

ETV Bharat / state

ಡೆತ್ ನೋಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ - ಬೆಂಗಳೂರಿನಲ್ಲಿ ನವವಿವಾಹಿತೆ ಆತ್ಮಹತ್ಯೆ

ಡೆತ್ ನೋಟ್ ಬರೆದಿಟ್ಟು ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

woman commit suicide in bengaluru
ನವವಿವಾಹಿತೆ ಆತ್ಮಹತ್ಯೆ

By

Published : Feb 24, 2020, 3:43 AM IST

ಬೆಂಗಳೂರು: ಡೆತ್ ನೋಟ್ ಬರೆದಿಟ್ಟು ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಗೋಪಾಲ‌ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಲಗ್ಗೆರೆಯ ಮನೆಯೊಂದರಲ್ಲಿ ನಡೆದಿದೆ.

ಭಾರತಿ ಎಂಬುವಳೆ ಮೃತಪಟ್ಟ ಮಹಿಳೆ. ಕಳೆದ ನಾಲ್ಕು ತಿಂಗಳ ಹಿಂದೆ ಮೊಬೈಲ್ ಶಾಪ್​ನಲ್ಲಿ ಕೆಲಸ ಮಾಡುವ ಸತೀಶ್ ಎಂಬುವರೊಂದಿಗೆ ಈಕೆಯ ವಿವಾಹವಾಗಿತ್ತು. ಆರಂಭದಲ್ಲಿ ನವದಂಪತಿ ಚೆನ್ನಾಗಿಯೇ ಇದ್ದರು. ಹೀಗಿರುವಾಗ ಕೆಲ ತಿಂಗಳ ಹಿಂದೆ ಭಾರತಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಆಗಾಗ ಹೊಟ್ಟೆನೋವು ಬರುತ್ತಿದ್ದರಿಂದ ನೋವು ಸಹಿಸಿಕೊಳ್ಳದೆ ತನ್ನ ಸಾವಿಗೆ ತಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಮನೆಯ ಕೊಠಡಿಯಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ತಮ್ಮ ಮಗಳನ್ನು ಗಂಡ ಹೊಡೆದು ಸಾಯಿಸಿದ್ದಾನೆ ಎಂದು ಮೃತಳ ಪೋಷಕರು ಅರೋಪಿಸಿದ್ದಾರೆ. ಈ ಕುರಿತು ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸತೀಶ್​​ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details