ಕರ್ನಾಟಕ

karnataka

ETV Bharat / state

ಜೈಲಲ್ಲಿದ್ದ ಮಗನಿಗೆ ಬ್ಯಾಗ್​ನಲ್ಲಿ ಡ್ರಗ್ಸ್​ ಕೊಡಲು ಯತ್ನಿಸಿ ಜೈಲುಪಾಲಾದ ತಾಯಿ! - ಪರಪ್ಪನ ಅಗ್ರಹಾರ ಜೈಲಿನಲ್ಲಿ ಡ್ರಗ್ಸ್​ ಕೊಡಲು ಯತ್ನಿಸಿದ ಮಹಿಳೆ ಬಂಧನ

ಜೈಲು ಸಿಬ್ಬಂದಿ ಈಕೆಯನ್ನು ಪರಿಶೀಲಿಸಿದ ವೇಳೆ ಮಾದಕ ವಸ್ತು ಪತ್ತೆಯಾಗಿದೆ. ತಕ್ಷಣ ಸಿಬ್ಬಂದಿ ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ಪರ್ವೀನ್ ತಾಜ್ ಹಾಗೂ ಮಗ ಬಿಲಾಲ್ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ..

woman-arrested-in-drugs-supply-case-in-bengaluru
ಜೈಲಲ್ಲಿದ್ದ ಮಗನಿಗೆ ಬ್ಯಾಗ್​ ಜೊತೆ ಡ್ರಗ್ಸ್​ ಕೊಡಲು ಯತ್ನಿಸಿ ಜೈಲುಪಾಲಾದ ತಾಯಿ!

By

Published : Jun 17, 2022, 5:33 PM IST

Updated : Jun 17, 2022, 6:22 PM IST

ಬೆಂಗಳೂರು :ಜೈಲುಹಕ್ಕಿಯಾಗಿರುವ ಮಗನ ಭೇಟಿ ನೆಪದಲ್ಲಿ ಮಾದಕ ವಸ್ತು ನೀಡಲು ಯತ್ನಿಸಿದ ಮಹಿಳೆಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಪರ್ವೀನ್ ತಾಜ್ ಎಂಬ ಮಹಿಳೆ ಬಂಧಿತಆರೋಪಿ.

ಬಂಧಿತಳ ಮಗ ಮೊಹಮ್ಮದ್ ಬಿಲಾಲ್ ದರೋಡೆ ಸೇರಿದಂತೆ 11 ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಕೋಣನಕುಂಟೆ ಪೊಲೀಸರು ಬಿಲಾಲ್​ನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದರು. ತಾಯಿ, ಮಗ ಶಿಕಾರಿಪಾಳ್ಯದಲ್ಲಿ ವಾಸವಾಗಿದ್ದರು‌.

ಮಗನನ್ನು ನೋಡಲು ಪರ್ವೀನ್ ಆಗಾಗ ಜೈಲಿಗೆ ಬರುತ್ತಿದ್ದಳು. ಆದರೆ, ಕಳೆದ ಜೂನ್ 13ರಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದ ಮಹಿಳೆ, ಮಗನಿಗೆ ಬಟ್ಟೆ ಕೊಡುವ ನೆಪದಲ್ಲಿ ಊಟದ ಬಾಕ್ಸ್​ನಲ್ಲಿ 5 ಲಕ್ಷ ರೂ. ಮೌಲ್ಯದ ಮಾದಕ ವಸ್ತು ಹ್ಯಾಶಿಷ್ ಆಯಿಲ್ ತಂದಿದ್ದಳು.

ಜೈಲು ಸಿಬ್ಬಂದಿ ಈಕೆಯನ್ನು ಪರಿಶೀಲಿಸಿದ ವೇಳೆ ಮಾದಕ ವಸ್ತು ಪತ್ತೆಯಾಗಿದೆ. ತಕ್ಷಣ ಸಿಬ್ಬಂದಿ ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ಪರ್ವೀನ್ ತಾಜ್ ಹಾಗೂ ಮಗ ಬಿಲಾಲ್ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಜೈಲಿನಲ್ಲಿರುವ ವ್ಯಕ್ತಿಗೆ ತನ್ನ ಮಗನ ಮೂಲಕ ಬಟ್ಟೆ‌ಯ ಬ್ಯಾಗ್ ನೀಡಬೇಕೆಂದು ನನಗೆ ಯಾರೋ ಫೋನ್ ಕರೆ ಮಾಡಿ ತಿಳಿಸಿದ್ದರು.‌ ಅದರಂತೆ ನಾನು ಬ್ಯಾಗ್ ನೀಡಲು ಒಪ್ಪಿಕೊಂಡೆ. ಬ್ಯಾಗ್​ನಲ್ಲಿ ಡ್ರಗ್ಸ್ ಇರುವುದು ಗೊತ್ತಿರಲಿಲ್ಲ ಎಂದು ಆರೋಪಿ ಮಹಿಳೆ ಹೇಳಿಕೆ ನೀಡಿದ್ದಾಳೆ.‌‌ ಹೇಳಿಕೆ ಮೇರೆಗೆ ಈಕೆಯ ಫೋನ್‌ಗೆ ಬಂದಿದ್ದ ಮೊಬೈಲ್‌‌ ನಂಬರ್ ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪರಪ್ಪನ ಅಗ್ರಹಾರ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಗ್ಯಾಸ್ ಕಟರ್ ಬಳಸಿ ಎಟಿಎಂನಲ್ಲಿ ಹಣ ಎಗರಿಸಲು ಯತ್ನಿಸಿದ ಖದೀಮ ಅರೆಸ್ಟ್!

Last Updated : Jun 17, 2022, 6:22 PM IST

For All Latest Updates

TAGGED:

ABOUT THE AUTHOR

...view details