ಕರ್ನಾಟಕ

karnataka

ETV Bharat / state

ಜರ್ಮನಿಯಿಂದ ಬೆಂಗಳೂರಿಗೆ ಡ್ರಗ್ಸ್ ಆಮದು‌..ಅಂಚೆ ಕಚೇರಿಗೆ ಬಂದ ಮಹಿಳೆ ಎನ್​ಸಿಬಿ ಬಲೆಗೆ - ಮಾದಕವಸ್ತು ನಿಗ್ರಹ ದಳ

ಜರ್ಮನಿಯಿಂದ ಡ್ರಗ್ಸ್​ ಆಮದು ಮಾಡಿಕೊಂಡಿದ್ದ ಮಹಿಳೆಯನ್ನು ಮಾದಕ ನಿಗ್ರಹ ದಳದ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ‌.

woman-arrested-by-ncb-who-importing-drugs-from-germany
ಬೆಂಗಳೂರಿಗೆ ಡ್ರಗ್ಸ್ ಆಮದು‌ ಮಾಡಿಕೊಂಡ ಆರೋಪಿ ಬಂಧನ

By

Published : Aug 27, 2021, 9:11 PM IST

ಬೆಂಗಳೂರು:ಜರ್ಮನಿಯಿಂದ ಬೆಂಗಳೂರಿಗೆ ಡ್ರಗ್ಸ್​ (ಎಂಡಿಎಂಎ) ಆಮದು ಮಾಡಿಕೊಂಡಿದ್ದ ಮಹಿಳೆಯನ್ನು ಮಾದಕವಸ್ತು ನಿಗ್ರಹ ದಳ (ಎನ್​ಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ‌. ಯೋಗಿತಾ ಎಂಬುವಳು ಬಂಧಿತ ಆರೋಪಿಯಾಗಿದ್ದಾಳೆ.

ಬೆಂಗಳೂರಿನಲ್ಲಿ ಆಫ್ರಿಕನ್ ಪ್ರಜೆಗಳ ಜೊತೆ ಮಾದಕ ವಸ್ತು ಧಂದೆಯಲ್ಲಿ ಸಕ್ರಿಯಳಾಗಿದ್ದ ಆರೋಪಿ, 3 ವರ್ಷದಿಂದ ರೇವ್ ಪಾರ್ಟಿಗಳಿಗೆ ಮಾದಕ ಸರಬರಾಜು ಮಾಡುತ್ತಿದ್ದಳು. ಇತ್ತೀಚೆಗೆ ಯೋಗಿತಾ ಹೆಸರಿಗೆ ಎಲೆಕ್ಟ್ರಾನಿಕ್ ಸಿಟಿ ಅಂಚೆ ಕಚೇರಿ ವಿಳಾಸಕ್ಕೆ ಬಂದಿದ್ದ ಕಾರ್ಟನ್ ಬಾಕ್ಸ್ ಪಾರ್ಸಲ್​ನಲ್ಲಿದ್ದ ಸ್ಯಾಂಡ್ ವಿಚ್ ಗ್ರಿಲ್, ಅಲಂಕಾರಿಕ ಸಾಮಗ್ರಿಗಳಲ್ಲಿ ಎಂಡಿಎಂಎ ಇರುವುದನ್ನ ಎನ್​ಸಿಬಿ ಅಧಿಕಾರಿಗಳು ದೃಢಪಡಿಸಿಕೊಂಡಿದ್ದರು.

ಮಾದಕವಸ್ತು

ಬಳಿಕ ಕಾರ್ಯಪ್ರವೃತ್ತರಾದ ಎನ್​ಸಿಬಿ ಅಧಿಕಾರಿಗಳು ಇಂದು ಪಾರ್ಸಲ್ ಸ್ವೀಕರಿಸಲು ಬಂದ ಯೋಗಿತಾಳನ್ನ ಬಂಧಿಸಿ 40 ಲಕ್ಷ ಮೌಲ್ಯದ 1 ಕೆ.ಜಿಯಷ್ಟು ಎಂಡಿಎಂಎ ಹರಳುಗಳನ್ನ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:ಅಧಿವೇಶನದ ವೇಳೆ ಸಚಿವರು, ಶಾಸಕರು, ಅಧಿಕಾರಿ ವರ್ಗ ಯಾರೂ ರಜೆ ಕೇಳುವಂತಿಲ್ಲ‌: ಸ್ಪೀಕರ್​​

ABOUT THE AUTHOR

...view details