ಬೆಂಗಳೂರು: ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಬೆಂಬಲಿಗರು ಒಂಟಿ ಮಹಿಳೆಯ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ರಾತ್ರೋರಾತ್ರಿ ಮನೆಗೆ ನುಗ್ಗಿ ಗೂಂಡಾಗಿರಿ ಮಾಡಿರುವುದಲ್ಲದೇ ತನ್ನನ್ನೇ ಮನೆಯಿಂದ ಹೊರಹಾಕಿ ಬೀಗ ಹಾಕಿದ್ದಾರೆ ಎಂದು ಸೋನಂ ಮಿಶ್ರಾ ಎಂಬುವರು ಆರೋಪಿಸಿದ್ದಾರೆ.
ಸೋಮವಾರ ತಡರಾತ್ರಿ ರಿಚರ್ಡ್ಸ್ ಪಾರ್ಕ್ ಬಳಿ ಹರ್ಮನ್ ರಿಗಾಲಿಯಾ ಅಪಾರ್ಟ್‌ಮೆಂಟಿನಲ್ಲಿರುವ ತಮ್ಮ ಮನೆಗೆ ನುಗ್ಗಿರುವ ಐವರು ಯುವಕರು, ಏಕಾಏಕಿ ಮನೆಯಲ್ಲಿದ್ದ ಮಾಲಕಿ ಸೋನಂ ಮಿಶ್ರಾರನ್ನು ಹೊರಕಳುಹಿಸಿ ಮನೆಗೆ ಬೀಗ ಹಾಕಿದ್ದಾರಂತೆ.