ಬೆಂಗಳೂರು: ಗಂಡನ ವಿರುದ್ದ ವರದಕ್ಷಿಣೆ ಕಿರುಕುಳದ ಆರೋಪದ ವಿಡಿಯೋ ಮಾಡಿ ಪತ್ನಿ ನೇಣಿಗೆ ಶರಣಾಗಿರುವ ಘಟನೆ ಬನಶಂಕರಿ ಠಾಣಾ ವ್ಯಾಪ್ತಿಯ ಕದಿರೇನಹಳ್ಳಿಯಲ್ಲಿ ನಡೆದಿದೆ.
ವರದಕ್ಷಿಣೆ ಕಿರುಕುಳ ಸಂಬಂಧ ದೂರು ನೀಡಿದ್ದ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ! - ವರದಕ್ಷಿಣೆ ಕಿರುಕುಳ ದೂರು ನೀಡಿದ್ದ ಮಹಿಳೆ
ಪತಿ ಜಯಕುಮಾರ್ ವಿರುದ್ಧ ದೀಪಿಕಾ ಅಜ್ಜಂಪುರ ಠಾಣೆಗೆ ದೂರು ನೀಡಿದ್ದಳು. ದೂರಿನ ಬಳಿಕ ತವರು ಮನೆಯಿಂದ ನಾಪತ್ತೆಯಾಗಿದ್ದು, ಇಂದು ಬೆಂಗಳೂರಿನ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದೀಪಿಕಾ ಶವ ಪತ್ತೆಯಾಗಿದೆ.
ದೀಪಿಕಾ (26) ಮೃತ ಮಹಿಳೆ. ಪತಿ ಜಯಕುಮಾರ್ ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಮಹಿಳೆ. ತನ್ನ 4 ವರ್ಷದ ಗಂಡು ಮಗುವಿನೊಂದಿಗೆ ಕಳೆದ 4 ದಿನಗಳ ಹಿಂದೆ ತವರೂರಾದ ಅಜ್ಜಂಪುರಕ್ಕೆ ತೆರಳಿದ್ದಳು. ತವರಿಗೆ ತೆರಳಿದ್ದ ಸಂದರ್ಭ ಅನಾರೋಗ್ಯದಿಂದ ಮಗು ಮೃತಪಟ್ಟಿತ್ತು. ಬಳಿಕ ದೀಪಿಕಾ ಪತಿಯ ವಿರುದ್ಧ ಅಜ್ಜಂಪುರ ಠಾಣೆಗೆ ದೂರು ನೀಡಿದ್ದಳು.
ದೂರಿನ ಬಳಿಕ ತವರು ಮನೆಯಿಂದ ನಾಪತ್ತೆಯಾಗಿದ್ದಳು. ಈ ಸಂಬಂಧ ಪೋಷಕರು ತರೀಕೆರೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಆದರೆ ಇಂದು ಬೆಂಗಳೂರಿನ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದೀಪಿಕಾ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.