ಕರ್ನಾಟಕ

karnataka

ETV Bharat / state

ನಾನು ಹೈಸ್ಕೂಲ್ ಓದಬೇಕಾದ್ರೆ ತರಕಾರಿ, ನಿಂಬೆಹಣ್ಣು ಮಾರಿಕೊಂಡು ಇದ್ದೆ: ಬಿಎಸ್​ವೈ

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸರ್ಕಾರದಿಂದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್​​ಗಳ ವಿತರಣೆ ಮಾಡಲಾಯಿತು. ಈ ವೇಳೆ ಮಾತನಾಡಿದ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರು, ನಾನು ಮಂಡ್ಯದಲ್ಲಿ ಹೈಸ್ಕೂಲ್ ಓದಬೇಕಾದ್ರೆ ತರಕಾರಿ, ನಿಂಬೆಹಣ್ಣು ಮಾರಿಕೊಂಡು ಇದ್ದೆ. ಇವಾಗ ರಾಜ್ಯದ ಜನರ ಆಶೀರ್ವಾದದಿಂದ‌ ನಾಲ್ಕನೇ ಬಾರಿಗೆ ಸಿಎಂ ಆಗಿ ಬಂದಿದ್ದೇನೆ ಎಂದು ಹೇಳುವ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ರು.

BSY
ಬಿಎಸ್​ವೈ

By

Published : Jan 12, 2020, 2:15 PM IST

ಬೆಂಗಳೂರು:ಹೈಸ್ಕೂಲ್ ವ್ಯಾಸಂಗ ಮಾಡುವಾಗ ಬೂಕನಕೆರೆಯಲ್ಲಿ ನಿಂಬೆಹಣ್ಣು, ತರಕಾರಿ ಮಾರುತ್ತಿದ್ದೆ. ನಾನು ಇಂದು ನಾಲ್ಕನೇ ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ, ಅಚಲ ವಿಶ್ವಾಸವಿದ್ದರೆ ಯಾರು ಏನು ಬೇಕಾದರೂ ಆಗಬಹುದು ಎಂದು ತಮ್ಮ ಜೀವನವನ್ನೇ ಉದಾಹರಣೆ ನೀಡಿ ವಿದ್ಯಾರ್ಥಿಗಳಿಗೆ ಭವಿಷ್ಯದ ಗುರಿಯೊಂದಿಗೆ ಸಂಕಲ್ಪ ತೊಟ್ಟು ಮುನ್ನಡೆಯುವಂತೆ ಕರೆ ನೀಡಿದರು.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸರ್ಕಾರದಿಂದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್​​ಗಳ ವಿತರಣೆ ಯೋಜನೆಯಡಿ ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ ಕಲೆ, ವಾಣಿಜ್ಯ, ವಿಜ್ಞಾನ ಪದವಿ ಹಾಗೂ ಇಂಜಿನಿಯರಿಂಗ್‌, ಮೆಡಿಕಲ್‌, ಪಾಲಿಟೆಕ್ನಿಕ್‌ ಡಿಪ್ಲೊಮಾ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ಸರ್ಕಾರಿ-ಅನುದಾನಿತ ಕಾಲೇಜುಗಳ 1,09,916 ವಿದ್ಯಾರ್ಥಿಗಳಿಗೆ 311 ಕೋಟಿ ರೂ. ವೆಚ್ಚದಲ್ಲಿ ಲ್ಯಾಪ್‌ಟಾಪ್‌ ವಿತರಣೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಾಂಕೇತಿಕವಾಗಿ ಚಾಲನೆ ನೀಡಿದರು. ನಂತರ ಯುವ ಸಬಲೀಕರಣ ಕೇಂದ್ರಗಳನ್ನು ಉದ್ಘಾಟಿಸಿದರು.

ನಾನು ಹೈಸ್ಕೂಲ್ ಓದಬೇಕಾದ್ರೆ ತರಕಾರಿ, ನಿಂಬೆಹಣ್ಣು ಮಾರಿಕೊಂಡು ಇದ್ದೆ: ಬಿಎಸ್​ವೈ

ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಿಎಂ, ನಿಮ್ಮ ತಂದೆ ತಾಯಿಗಳು ನಿಮ್ಮ ಮೇಲೆ ಬಹಳ ನಿರೀಕ್ಷೆ ಇಟ್ಟಿದ್ದಾರೆ. ನಾನು ನಿಮ್ಮ ಕುಟುಂಬದ ಪರಿಸ್ಥಿತಿ ಬಗ್ಗೆ ಮಾತನಾಡಲು ಹೋಗಲ್ಲ. ನೀವು ಮನಸ್ಸು ಮಾಡಿದರೆ ಖಂಡಿತ ನೀವಂದುಕೊಂಡಿದ್ದನ್ನು, ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಸಾಧಿಸಬಹುದು. ಇದಕ್ಕೆ ನಾನೇ ನಿದರ್ಶನ. ನಾನು ಮಂಡ್ಯದಲ್ಲಿ ಹೈಸ್ಕೂಲ್ ಓದಬೇಕಾದ್ರೆ ತರಕಾರಿ, ನಿಂಬೆಹಣ್ಣು ಮಾರಿಕೊಂಡು ಇದ್ದೆ. ಇವಾಗ ರಾಜ್ಯದ ಜನರ ಆಶೀರ್ವಾದದಿಂದ‌ ನಾಲ್ಕನೇ ಬಾರಿಗೆ ಸಿಎಂ ಆಗಿ ಬಂದು, ನಿಮ್ಮ ಮುಂದೆ ನಿಂತಿದ್ದೇನೆ. ಬೂಕನಕರೆಯಲ್ಲಿ ಹುಟ್ಟಿ ಹಲವು ರಾಜಕೀಯ ನಾಯಕರ ಮಾರ್ಗದರ್ಶನ ಪಡೆದು, ಈಗ ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ನಾನು ಸಂಕಲ್ಪ ಮಾಡಿದ್ದರಿಂದಲೇ ಈ ಮಟ್ಟಕ್ಕೆ ಬೆಳೆದಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದು ಸಾಕ್ಷಿ ಎಂದರು.

ಸ್ವಾಮಿ ವಿವೇಕಾನಂದರ ಬದುಕು ಜನರ ಬದುಕನ್ನು ಬದಲಿಸಿದೆ. ಇಂದಿನ ಯುವ ಜನತೆ ಅಧುನಿಕ ಅಲೆಯಲ್ಲಿ ಸಿಲುಕಿ ದೇಶದ ಪರಂಪರೆ ಆಚಾರ ವಿಚಾರ ಮರೆಯುವ ಪರಿಸ್ಥಿತಿ ಬರುತ್ತಿದೆ. ವಿದ್ಯಾರ್ಥಿಗಳು ವಿದೇಶಿ ವ್ಯಾಮೋಹದಿಂದ ಹೊರಗೆ ಬನ್ನಿ ಜನರ ತೆರಿಗೆ ಹಣದಲ್ಲಿ ನಿಮ್ಮನ್ನು ಸಾಫ್ಟವೇರ್ ಇಂಜನಿಯರ್ಸ್, ಡಾಕ್ಟರ್ಸ್ ಮಾಡ್ತೀವಿ. ಆದರೆ ಇಲ್ಲಿ ಓದಿ ವಿದೇಶದಲ್ಲಿ ನೆಲೆಸೋ ಬಗ್ಗೆ ವಿದ್ಯಾರ್ಥಿಗಳು ಚಿಂತನೆ ಮಾಡೋದನ್ನ ಬಿಡಬೇಕು ದೇಶದಲ್ಲೇ ಇದ್ದು ಸಾಧನೆ ಮಾಡಿ ಎಂದು ಕರೆ ನೀಡಿದರು. ದಿನಕ್ಕೆ ಹತ್ತು ಪುಟವಾದರು ವಿವೇಕಾನಂದರ ಜೀವನ ಚರಿತ್ರೆಯನ್ನ ಓದಿ ಇದರಿಂದ ನಿಮಗೆ ಸ್ಪೂರ್ತಿ ಮತ್ತು ಸ್ವಾಭಿಮಾನ ಬರುತ್ತದೆ ಎಂದರು.

ಡಿಸಿಎಂ ಅಶ್ವಥ ನಾರಾಯಣ ಮಾತನಾಡಿ, ವಿದ್ಯಾರ್ಥಿಗಳಿಗೆ ಸಿಎಎ ಕಾಯ್ದೆ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಸಿಎಎ ಕಾಯ್ದೆ ಬಗ್ಗೆ ದೇಶಾದ್ಯಂತ ಚರ್ಚೆಗಳಾಗ್ತಿವೆ. ಸ್ವಾಮಿ‌ ವಿವೇಕಾನಂದರ ಮಾತುಗಳೂ ಸಿಎಎ ಅರ್ಥ ಮಾಡಿಕೊಳ್ಳಲು ಉತ್ತೇಜನ ನೀಡಲಿದೆ, ಸಿಎಎಗೆ ಅನಗತ್ಯ ವಿರೋಧ ವ್ಯಕ್ತವಾಗ್ತಿದೆ. ರಾಷ್ಟ್ರದಲ್ಲಿ ಒಡೆದು ಆಳುವ ವಾತಾವರಣ ಇದೆ. ವಿರೋಧ ಪಕ್ಷಗಳಿಂದ ಇಂಥ ವಾತಾವರಣ ಸೃಷ್ಟಿ, ದೇಶದಲ್ಲಿ ಇಂತಹ ವಾತಾವರಣ ನಿರ್ಮಾಣವಾಗೋದು ಸರಿಯಲ್ಲ. ಇದು ವಿವೇಕಾನಂದರ ಆಶಯಕ್ಕೆ ವಿರುದ್ಧವಾದ ನಡವಳಿಕೆ ಎಂದರು.

ಟೀಂ ಇಂಡಿಯಾ ಮಹಿಳಾ ತಂಡದ ಆಟಗಾರ್ತಿ ವೇದಾಕೃಷ್ಣಮೂರ್ತಿ ಮಾತನಾಡಿ, ಬೇರೆಯವರಿಗೋಸ್ಕರ ಬದುಕಬೇಡಿ,ನಿಮಗೋಸ್ಕರ ಬದುಕಿ,‌ ಸಾಧನೆಗೆ ಅಳುಕು, ಹಿಂಜರಿಕೆ ಬೇಡ, ಗುರಿಯೊಂದಿಗೆ ಮುನ್ನುಗ್ಗಿ. ಆತ್ಮವಿಶ್ವಾಸದಿಂದ ಮುಂದೆ ಸಾಗಿ ಎಂದು ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು.

ಸಿದ್ದು ಕಾಲದ ಯೋಜನೆಗೆ ಬಿಎಸ್​​ವೈ ಚಾಲನೆ:

ಸಿದ್ದರಾಮಯ್ಯ ಕಾಲದ ಉಚಿತ ಲ್ಯಾಪ್ ಟಾಪ್ ಭಾಗ್ಯಕ್ಕೆ ಬಿಜೆಪಿ ಸರ್ಕಾರದಿಂದ ಚಾಲನೆ ನೀಡಲಾಯಿತು. 2017-18 ನೇ ಸಾಲಿನಿಂದ ಎಲ್ಲ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸುವ ಭರವಸೆ ಸಿದ್ದರಾಮಯ್ಯ ಕೊಟ್ಟಿದ್ದರು. ಆದ್ರೆ ಟೆಂಡರ್ ಸಮಸ್ಯೆ, ರಾಜಕೀಯ ಸಂದರ್ಭಗಳಿಂದ 3 ವರ್ಷಗಳಿಂದ ಲ್ಯಾಪ್‌ಟಾಪ್​​​ಗಳ‌ ವಿತರಣೆ ಆಗಿರಲಿಲ್ಲ.

ABOUT THE AUTHOR

...view details