ಬೆಂಗಳೂರು:ಬೆಳಕಿನ ಹಬ್ಬ ದೀಪಾವಳಿ ಆರಂಭವಾಗಿದೆ. ಎಳೆ ವಯಸ್ಸಿನ ಮಕ್ಕಳಿಗೆ, ಯುವ ಸಮೂಹಕ್ಕೆ ಪಟಾಕಿ, ದೀಪ ಹಚ್ಚುವ ಸಂಭ್ರಮವಾದ್ರೆ, ಹಿರಿಯರಿಗೆ ಪೂಜೆ, ಹಬ್ಬದ ಕ್ರಮಗಳು, ವಿಶೇಷ ಊಟ ತಿಂಡಿಯೇ ಹಬ್ಬದ ದಿನಗಳ ಸಂಭ್ರಮ.
ಹಬ್ಬದ ಹಿನ್ನೆಲೆಯನ್ನು ತಿಳಿದು ಆಚರಿಸಿದರೆ ಇನ್ನಷ್ಟು ಆಚರಣೆ ಅರ್ಥಪೂರ್ಣವಾಗುವುದರಲ್ಲಿ ಎರಡು ಮಾತಿಲ್ಲ. ದೀಪಾವಳಿಯ ವಿಶೇಷತೆಗಳೇನು, ಯಾವ ರೀತಿ ಆಚರಿಸಬೇಕೆಂದು ಖ್ಯಾತ ಜ್ಯೋತಿಷಿಗಳಾದ ಪ್ರೊ.ವಿಜಯಕುಮಾರ್ ಟಿ.ಆರ್ ಅವರು ಮಾತನಾಡಿದ್ದಾರೆ.
ಮೂರು ದಿನ ಆಚರಿಸುವ ಹಬ್ಬ ದೀಪಾವಳಿ:
ಮೂರು ದಿನಗಳ ಕಾಲ ಆಚರಿಸುವ ಹಬ್ಬ ದೀಪಾವಳಿ. ಕಾಮ್ಯ ಫಲದಾಯಕ ಹಬ್ಬ. ಐಭೋಗಕ್ಕೆ ಬೇಕಾದ ಎಲ್ಲಾ ವಸ್ತುಗಳಿಗೆ ಮಹಾಲಕ್ಷ್ಮಿ ಕಾರಣರಾಗುತ್ತಾಳೆ. ಇದ್ರ ಜೊತೆಗೆ ಆರೋಗ್ಯ ಹಾಗೂ ಪಾಪಗಳನ್ನು ಕಡಿಮೆ ಮಾಡುವ ಮೂರು ಬೇಡಿಕೆಗಳನ್ನು ಒದಗಿಸುವ ಹಬ್ಬ ದೀಪಾವಳಿ. ಇಂದು ನರಕಚತುರ್ದಶಿ, ಎರಡನೇ ದಿನ ಅಮಾವಾಸ್ಯೆ ಹಾಗೂ ಮೂರನೇ ದಿನ ಬಲಿಪಾಡ್ಯಮಿ ಎಂದು ಆಚರಿಸುತ್ತೇವೆ ಎಂದರು.