ಕರ್ನಾಟಕ

karnataka

ETV Bharat / state

SSLC ಪರೀಕ್ಷೆಗೆ ಮಕ್ಕಳ ಸಿದ್ಧತೆ ಹೇಗಿದೆ.. ವಿದ್ಯಾರ್ಥಿಗಳು ಏನಂತಾರೆ?

ಇದೇ ಮೊದಲ ಬಾರಿಗೆ ಪ್ರಶ್ನೆ ಪತ್ರಿಕೆ ಮಾದರಿ ಬದಲಾವಣೆ ಮಾಡಿದ್ದಾರೆ. ಆರು ದಿನಗಳ ಕಾಲ ನಡೆಯುತ್ತಿದ್ದ ಪರೀಕ್ಷೆಯನ್ನ ಎರಡು ದಿನದಲ್ಲಿ ನಡೆಸುತ್ತಿದ್ದಾರೆ. ಕೋರ್ ವಿಷಯಕ್ಕೆ ಒಂದು ದಿನ, ಭಾಷಾ ವಿಷಯಕ್ಕೆ ಇನ್ನೊಂದು ದಿನ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಈ ಹೊಸ ಮಾದರಿಗೆ ಸಿದ್ಧತೆ ನಡೆಸುತ್ತಿದ್ದಾರೆ.

SSLC  ಪರೀಕ್ಷೆಗೆ ಮಕ್ಕಳ ಸಿದ್ಧತೆ ಹೇಗಿದೆ?
SSLC ಪರೀಕ್ಷೆಗೆ ಮಕ್ಕಳ ಸಿದ್ಧತೆ ಹೇಗಿದೆ?

By

Published : Jun 29, 2021, 7:40 PM IST

ಬೆಂಗಳೂರು: ಬಹುದಿನಗಳಿಂದ ಕಾಯುತ್ತಿದ್ದ ಎಸ್ಎಸ್ಎಲ್​​ಸಿ ಪರೀಕ್ಷೆಯ ದಿನಾಂಕ ನಿಗದಿ ಮಾಡಲಾಗಿದೆ. ಕೊಟ್ಟ ಮಾತಿನಂತೆಯೇ 20 ದಿನದ ಮುಂಚಿತವಾಗಿಯೇ ಸಚಿವರು ಪರೀಕ್ಷೆಯ ದಿನಾಂಕ ಘೋಷಿಸಿದ್ದಾರೆ. ಇದೇ ಮೊದಲ ಬಾರಿಗೆ ಪ್ರಶ್ನೆ ಪತ್ರಿಕೆ ಮಾದರಿ ಬದಲಾವಣೆ ಮಾಡಿದ್ದಾರೆ. ಆರು ದಿನಗಳ ಕಾಲ ನಡೆಯುತ್ತಿದ್ದ ಪರೀಕ್ಷೆಯನ್ನ ಎರಡು ದಿನದಲ್ಲಿ ನಡೆಸುತ್ತಿದ್ದಾರೆ. ಕೋರ್ ವಿಷಯಕ್ಕೆ ಒಂದು ದಿನ, ಭಾಷಾ ವಿಷಯಕ್ಕೆ ಇನ್ನೊಂದು ದಿನ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಈ ಹೊಸ ಮಾದರಿಗೆ ಸಿದ್ಧತೆ ನಡೆಸುತ್ತಿದ್ದಾರೆ.
ರಾಜ್ಯಾದ್ಯಂತ 8,76,581 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಈ ಹೊಸ ವಿಧಾನಕ್ಕೆ ಸಿದ್ಧರಾಗಬೇಕಿದೆ.

SSLC ಪರೀಕ್ಷೆಗೆ ಮಕ್ಕಳ ಸಿದ್ಧತೆ ಹೇಗಿದೆ?

ಈ ಕುರಿತು ಪ್ರತಿಕ್ರಿಯಿಸಿರುವ ಚರಣ್ ಪಬ್ಲಿಕ್ ಸ್ಕೂಲ್​​ನ‌ ವಿದ್ಯಾರ್ಥಿನಿ ಮೈತ್ರಿ, ಎಸ್ಎಸ್ಎಲ್​ಸಿ ಪರೀಕ್ಷೆಯನ್ನು ಯಾವಾಗ ಬರಿಬೇಕು ಅಂತ ನಿರ್ಧಾರ ಮಾಡಲಾಗಿದ್ದು, ಇದು ಬಹಳ ಸಂತಸದ ಸಂಗತಿ. ಪ್ರಶ್ನೆ ಪತ್ರಿಕೆ ಮಾದರಿ ಬದಲಾಗಿರುವುದರಿಂದ ಈಗಾಗಲೇ ನಮಗೆ ಶಾಲೆಯಲ್ಲಿ ಶಿಕ್ಷಕರು ತರಬೇತಿ ನೀಡಿದ್ದಾರೆ.

ಒಎಂಆರ್ ಶೀಟ್ ಮೂಲಕ ಪ್ರತಿ ವಾರ ಪರೀಕ್ಷೆ ಬರೆಸಿ ಅಭ್ಯಾಸ ಮಾಡಿಸಿದ್ದಾರೆ‌. ಆದ್ದರಿಂದ ನಮ್ಮಲ್ಲಿ ಯಾವುದೇ ಆತಂಕವಿಲ್ಲ. ಬದಲಿಗೆ ಆತ್ಮವಿಶ್ವಾಸ ಹೆಚ್ಚಿದೆ. ಪರೀಕ್ಷೆಯನ್ನು ಚೆನ್ನಾಗಿ ಬರೆದು ಹೆಚ್ಚು ಅಂಕಗಳಿಸುವ ನಿರೀಕ್ಷೆಯಲ್ಲಿದ್ದೇವೆ ಎಂದರು.

40-40-40 ಮಾರ್ಕ್ಸ್ ಎಕ್ಸಾಂ
ಇನ್ನು ಪ್ರತಿ ಕೋರ್ ಸಬ್ಜೆಕ್ಟ್​​ಗೆ 40 ಅಂಕಗಳನ್ನ ನಿಗದಿ ಪಡಿಸಲಾಗಿದ್ದು, ಬಹು ಆಯ್ಕೆ ಮಾದರಿ ಇಡಲಾಗಿದೆ. ಇದು ಅಂಕಗಳಿಕೆಗೆ ಇನ್ನಷ್ಟು ಸಹಕಾರಿಯಾಗಲಿದ್ದು, ಪರೀಕ್ಷೆ ಬರೆಯಲು ಸುಲಭವಾಗಿದೆ ಅಂತಾ ವಿದ್ಯಾರ್ಥಿನಿ ಮೈತ್ರಿ ಅಭಿಪ್ರಾಯ ಪಟ್ಟರು..

ರಾಯಲ್ ಇಂಗ್ಲಿಷ್ ಸ್ಕೂಲ್​ನ ವಿದ್ಯಾರ್ಥಿನಿ ರಕ್ಷಿತಾ ಮಾತಾನಾಡಿ, ಈ ಸಲ ಎರಡು ದಿನಗಳ ಪರೀಕ್ಷೆ ನಡೆಯಲಿದ್ದು, ಮೂರು ಗಂಟೆಯಲ್ಲಿ ಮೂರು ವಿಷಯದ ಪರೀಕ್ಷೆ ನಡೆಯುತ್ತಿದೆ. ಒಂಎಂಆರ್ ಶೀಟ್ ನಲ್ಲಿ ಉತ್ತರ ಬರಿಬೇಕು. ಪಿಡಿಎಫ್ ಮುಖಾಂತರ ಹೇಗೆ ಓದಬೇಕು ಅಂತಲೂ ಶಿಕ್ಷಕರು ಹೇಳಿಕೊಟ್ಟಿದ್ದಾರೆ. ಆದರೆ, ಪರೀಕ್ಷಾ ಕೇಂದ್ರ ನಮ್ಮ ಶಾಲೆಯಲ್ಲೇ ಇರುತ್ತಾ? ಅನ್ನೋದು ಗೊತ್ತಿಲ್ಲ ಎಂದರು.

‘OMR ಶೀಟ್ ತುಂಬುವ​ ಅಭ್ಯಾಸವಿಲ್ಲ’

ಜಾಬೀರ್ ಎಂಬ ವಿದ್ಯಾರ್ಥಿ ಮಾತನಾಡಿ, ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದೇವೆ. ಈ ಸಲ ಒಎಂಆರ್​ ಶೀಟ್​ನಲ್ಲಿ ಪರೀಕ್ಷೆ ನಡೆಯುತ್ತದೆ ಅಂತಾ ಹೇಳುತ್ತಿದ್ದಾರೆ. ಆದರೆ, ಒಎಂಆರ್​ ಶೀಟ್​ನಲ್ಲಿ ಹೇಗೆ ಬರೆಯಬೇಕೆಂದು ತಿಳಿದಿಲ್ಲ ಎಂದರು. ವಿದ್ಯಾರ್ಥಿನಿ ಮೋನಿಶಾ ಮಾತಾನಾಡಿ, ಎರಡು ದಿನ ಪರೀಕ್ಷೆ ನಡೆಯಲಿದ್ದು, ಒಎಂಆರ್ ಶೀಟ್​​​ನಲ್ಲಿ ಫಿಲ್​ ಮಾಡಬೇಕೆಂದು ಹೇಳಿದ್ದಾರೆ. ಆದರೆ, ಶಾಲೆಯಲ್ಲಿ ಇದರ ಪ್ರಾಕ್ಟಿಸ್​​ ಮಾಡಿಸಿಲ್ಲ, ಮುಂದಿನ ದಿನಗಳಲ್ಲಿ ಮಾಡಿಸಬಹುದು ಎಂಬ ನಿರೀಕ್ಷೆಯಿದೆ ಎಂದರು.

ವೇಳಾಪಟ್ಟಿ ಹೀಗಿದೆ
ಕೋರ್ ಸಬ್ಜೆಕ್ಟ್: ಪೇಪರ್ : 1
19-7-2021ರ ಬೆಳಗ್ಗೆ 10-30 ರಿಂದ 1-30ರವೆಗೆ
ಗಣಿತ, ವಿಜ್ಞಾನ, ಸಮಾಜ ಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ/ ಕರ್ನಾಟಕ ಸಂಗೀತ

ಕಿರಿಯ ತಾಂತ್ರಿಕ ವಿಷಯಗಳು - ಪೇಪರ್: 3
19-7- 2021 ರ ಮಧ್ಯಾಹ್ನ 2-30 ರಿಂದ 5 ರವೆಗೆ

ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ & ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2
ಎಂಜಿನಿಯರಿಂಗ್ ಗ್ರಾಫಿಕ್ಸ್- 2
ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್
ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್

ಭಾಷಾ ವಿಷಯಗಳು - ಪೇಪರ್ 2
22-7-2021 ರ ಬೆಳಗ್ಗೆ 10-30 ರಿಂದ 1-30 ರವರೆಗೆ

ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ

ದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡ

ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲಿಷ್ ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು

ಎನ್ ಎಸ್ ಕ್ಯೂ ಎಫ್ : ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್

ತಲಾ 40 ಅಂಕಗಳ ಒಟ್ಟು 120 ಅಂಕದ ಪ್ರಶ್ನೆ ಪತ್ರಿಕೆ ಇದಾಗಿದ್ದು, ಮೂರು ಗಂಟೆ ಕಾಲ ಪರೀಕ್ಷೆ ಜರುಗಲಿದೆ. ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳು ಬಹು ಆಯ್ಕೆಯಾಗಿದ್ದು, ಒಎಂಆರ್ ಶೀಟ್ ನಲ್ಲಿ ನಮೂದಿಸಬೇಕು. ಇಲ್ಲಿ ಯಾವುದೇ ಪ್ರಶ್ನೆಗೆ ವಿವರಣೆಯ ಉತ್ತರದ ಅಗತ್ಯವಿರುವುದಿಲ್ಲ.

ABOUT THE AUTHOR

...view details