ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಮುಂದುವರೆಯಲಿದೆ ಮಂಜು ಕವಿದ ವಾತಾವರಣ.. - ಕರ್ನಾಟಕ ಹವಾಮಾನ ಇಲಾಖೆ ಸುದ್ದಿ

ಕರಾವಳಿಯಲ್ಲಿ ಇಂದಿನಿಂದ ಡಿಸೆಂಬರ್ 16ರವರೆಗೆ ಬಿಸಿಲಿನ ವಾತಾವರಣ ಮುಂದುವರಿಯಲಿದೆ. ಡಿಸೆಂಬರ್ 17ರಂದು ಪೂರ್ವ ಅಲೆಗಳ ಪ್ರಭಾವದಿಂದ ಹಗುರ ಮಳೆಯಾಗಲಿದೆ..

ಮಂಜು ಕವಿದ ವಾತಾವರಣ
ಮಂಜು ಕವಿದ ವಾತಾವರಣ

By

Published : Dec 13, 2020, 1:09 PM IST

ಬೆಂಗಳೂರು:ರಾಜ್ಯಾದ್ಯಂತ ಬಿಸಿಲಿನ ವಾತಾವರಣ ಮುಂದುವರೆದಿದೆ. ಕರಾವಳಿಯಲ್ಲಿ ಕನಿಷ್ಠ ಉಷ್ಣಾಂಶ 22ರಿಂದ 24 ಡಿಗ್ರಿ ದಾಖಲಾಗಿದೆ. ಬೀದರ್ 13 ಡಿಗ್ರಿ, ವಿಜಯಪುರ, ಹಾವೇರಿ, ಕೊಪ್ಪಳ, ಧಾರವಾಡ ಹಾಗೂ ಚಿತ್ರದುರ್ಗದಲ್ಲಿ14 ಡಿಗ್ರಿ, ಬೆಂಗಳೂರು ಹೆಚ್​ಎಎಲ್ ವಿಮಾನ ನಿಲ್ದಾಣ 15 ಡಿಗ್ರಿ, ದಾವಣಗೆರೆ 12 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕರಾದ ಸಿ ಎಸ್ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಮುಂಜಾನೆ ಮಂಜು ಬಿದ್ದ ವರದಿಯಾಗಿದ್ದು, ಕರಾವಳಿಯಲ್ಲಿ ಇಂದಿನಿಂದ ಡಿಸೆಂಬರ್ 16ರವರೆಗೆ ಬಿಸಿಲಿನ ವಾತಾವರಣ ಮುಂದುವರಿಯಲಿದೆ. ಡಿಸೆಂಬರ್ 17ರಂದು ಪೂರ್ವ ಅಲೆಗಳ ಪ್ರಭಾವದಿಂದ ಹಗುರ ಮಳೆಯಾಗಲಿದೆ.

ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ ಎಸ್ ಪಾಟೀಲ್

ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ 17 ರವರೆಗೆ ಬಿಸಿಲಿನ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಪೂರ್ವ ಅಲೆಗಳಿಂದ 16 ಹಾಗೂ 17ರಂದು ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಶುಭ್ರ ವಾತಾವರಣ ಇರಲಿದ್ದು ಕನಿಷ್ಠ 16 ಡಿಗ್ರಿ, ಗರಿಷ್ಠ 28 ಡಿಗ್ರಿ ದಾಖಲಾಗಿದೆ. ಮುಂಜಾನೆ ಮಂಜು ಬೀಳುವ ಹೆಚ್ಚಿನ ಸಾಧ್ಯತೆ ಇದೆ ಎಂದು ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.

ABOUT THE AUTHOR

...view details