ಕರ್ನಾಟಕ

karnataka

ETV Bharat / state

ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆ ನಡೆಸಲು ಸಿದ್ಧ: ಬಿಬಿಎಂಪಿ ಆಯುಕ್ತ

ಒಂದೇ ತಿಂಗಳಲ್ಲಿ ವಾರ್ಡ್ ಮೀಸಲಾತಿ ಅಂತಿಮ ಮಾಡಲು, ಆರು ತಿಂಗಳ ನಂತರ ಚುನಾವಣೆ ನಡೆಸಲು ಹೈಕೋರ್ಟ್ ಆದೇಶಿಸಿದೆ. ರಾಜ್ಯ ಚುನಾವಣಾ ಆಯೋಗ ಏನು ನಿರ್ದೇಶನ ಕೊಡಲಿದೆ ಆ ಪ್ರಕಾರ ಚುನಾವಣೆ ನಡೆಸುವುದು ಜಿಲ್ಲಾ ಚುನಾವಣಾಧಿಕಾರಿಯ ಕೆಲಸವಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ಬಿಬಿಎಂಪಿ ಆಯುಕ್ತರಾಗಿರುವ ಮಂಜುನಾಥ್ ಪ್ರಸಾದ್
ಬಿಬಿಎಂಪಿ ಆಯುಕ್ತರಾಗಿರುವ ಮಂಜುನಾಥ್ ಪ್ರಸಾದ್

By

Published : Dec 4, 2020, 5:28 PM IST

ಬೆಂಗಳೂರು: ಬಿಬಿಎಂಪಿಯ 198 ವಾರ್ಡ್​ಗಳಿಗೆ ಚುನಾವಣೆ ನಡೆಸಲು ಹೈಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತರಾಗಿರುವ ಮಂಜುನಾಥ್ ಪ್ರಸಾದ್ ನಗರದ ಅಂತಿಮ ಮತದಾರರ ಒಟ್ಟಿ ಬಿಡುಗಡೆಗೊಳಿಸಿದ್ದಾರೆ.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಚುನಾವಣಾ ಸಿದ್ಧತೆಗೆ ಸಂಬಂಧಿಸಿದಂತೆ ಮಾತನಾಡಿದ ಆಯುಕ್ತ ಮಂಜುನಾಥ್ ಪ್ರಸಾದ್, ಒಂದೇ ತಿಂಗಳಲ್ಲಿ ವಾರ್ಡ್ ಮೀಸಲಾತಿ ಅಂತಿಮ ಮಾಡಲು, ಆರು ತಿಂಗಳ ನಂತರ ಚುನಾವಣೆ ಮಾಡಲು ಹೈಕೋರ್ಟ್ ಆದೇಶಿಸಿದೆ. ವಾರ್ಡ್ ಮೀಸಲಾತಿ ಪಟ್ಟಿ ಸರ್ಕಾರವೇ ಅಂತಿಮಗೊಳಿಸಲಿದೆ. ಇದರಲ್ಲಿ ಬಿಬಿಎಂಪಿಯ ಪಾತ್ರ ಇಲ್ಲ ಎಂದರು.

ಇದನ್ನು ಓದಿ:ಬಿಬಿಎಂಪಿ ಚುನಾವಣೆ ನಡೆಸಲು ಹೈಕೋರ್ಟ್ ಆದೇಶ

ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗ ಏನು ನಿರ್ದೇಶನ ಕೊಡಲಿದೆ ಆ ಪ್ರಕಾರ ಚುನಾವಣೆ ನಡೆಸುವುದು ಜಿಲ್ಲಾ ಚುನಾವಣಾಧಿಕಾರಿಯ ಕೆಲಸ. ಅದನ್ನು ನಾವು ಪಾಲಿಸಲಿದ್ದೇವೆ. ಈಗಾಗಲೇ ಅಂತಿಮ ಮತದಾರರ ಪಟ್ಟಿ ಪ್ರಕಟ ಮಾಡಿಯಾಗಿದೆ ಎಂದರು.

ABOUT THE AUTHOR

...view details