ಕರ್ನಾಟಕ

karnataka

ETV Bharat / state

ಶಿಕ್ಷಣ ಇಲಾಖೆ ಋಣ ನನ್ನ ಮೇಲಿದೆ ಎಂದ್ರು ಶಿಕ್ಷಣ ಸಚಿವ ಸುರೇಶ್​ ಕುಮಾರ್​! - bangalore news

ಈ ಸಲದ ಶಿಕ್ಷಕರ ದಿನಾಚರಣೆ ಹೆಚ್ಚು ಆನಂದ ತಂದಿದೆ. ನನ್ನ ಅವಧಿಯಲ್ಲಿ ಶಿಕ್ಷಕರಿಗೆ ಹಿತ ನೀಡುತ್ತೇನೆ. ಶಿಕ್ಷಣ ಇಲಾಖೆ ಋಣ ನನ್ನ ಮೇಲಿದೆ ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಹೇಳಿದರು.

ಸಚಿವ ಸುರೇಶ ಕುಮಾರ್

By

Published : Sep 5, 2019, 3:13 AM IST

ಬೆಂಗಳೂರು:ನನ್ನ ತಾಯಿ ಸರ್ಕಾರಿ ಶಾಲೆ ಶಿಕ್ಷಕಿಯಾಗಿದ್ದವರು. ಒಂದು ರೀತಿಯಲ್ಲಿ ಶಿಕ್ಷಣ‌ ಇಲಾಖೆಯೇ ನನ್ನ ಬೆಳೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಹೇಳಿದ್ದು, ಇದೇ ವೇಳೆ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿದರು.

ಸಚಿವ ಸುರೇಶ ಕುಮಾರ್

ಈ ಸಲದ ಶಿಕ್ಷಕರ ದಿನಾಚರಣೆ ನನ್ನ ಪಾಲಿಗೆ ಸಂಭ್ರಮದ ದಿನವಾಗಿದೆ. ಶಿಕ್ಷಣ ಇಲಾಖೆಯ ಋಣ ತೀರಿಸಲು ನನಗೊಂದು ಅವಕಾಶ ಸಿಕ್ಕಿದೆ. ಈ ಅವಧಿಯಲ್ಲಿ ಶಿಕ್ಷಕರಿಗೆ ಹೆಚ್ಚು ಹಿತವನ್ನುಂಟು ಮಾಡುವ ಕಾರ್ಯಕ್ರಮ ಮಾಡುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ರಾಜ್ಯದ ಸರ್ಕಾರಿ ಶಾಲೆ ಶಿಕ್ಷಕರು ಬಹಳ ಬದ್ಧತೆ ಹೊಂದಿದ್ದಾರೆ. ‌ಅವರಿಂದ ಪರೀಕ್ಷೆಗಳಲ್ಲಿ ಒಳ್ಳೆ ಫಲಿತಾಂಶ ಬರುವ ನಿರೀಕ್ಷೆ ಇದೆ. ಹೀಗಾಗಿ, ಶಿಕ್ಷಕರಿಗೆ ಪ್ರೇರಣೆ ಕೊಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ABOUT THE AUTHOR

...view details