ಬೆಂಗಳೂರು:ವಾಟರ್ ಟ್ಯಾಂಕ್ ಕುಸಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಗಾರಿಯ ಮೇಲುಸ್ತುವಾರಿ ವಹಿಸಿಕೊಂಡಿದ್ದ ಮೇಸ್ತ್ರಿಯನ್ನು ವಶಕ್ಕೆ ಪಡೆದಿರುವ ಅಮೃತಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು ವಾಟರ್ ಟ್ಯಾಂಕ್ ದುರಂತ: ಮೇಸ್ತ್ರಿ ಪೊಲೀಸ್ ವಶಕ್ಕೆ
ವಾಟರ್ ಟ್ಯಾಂಕ್ ಕುಸಿತ ಪ್ರಕರಣದಲ್ಲಿ ಕಾಮಗಾರಿಯ ಮೇಲುಸ್ತುವಾರಿ ವಹಿಸಿಕೊಂಡಿದ್ದ ಮೇಸ್ತ್ರಿಯನ್ನು ಅಮೃತಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ದುರಂತದಲ್ಲಿ ದಾವಣಗೆರೆ ಮೂಲದ ಸಿವಿಲ್ ಇಂಜಿನಿಯರ್ ಕೃಷ್ಣಾಯಾದವ್ (25), ತಮಿಳುನಾಡು ಮೂಲದ ಪ್ರಭುರಾಮ್ (26) ಹಾಗೂ ಸೂಪರ್ ವೈಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಸುಮಂತ ಸಾವನ್ನಪ್ಪಿದ್ದಾರೆ. ಇನ್ನು, ಅರುಣ್, ರಂಜನ್, ಕಾರ್ತಿಕ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಗವಾರ ಬಳಿಯ ಜೋಗಿಪಾಳ್ಯದಲ್ಲಿಂದು 12ಗಂಟೆ ಸುಮಾರಿಗೆ ಕಾಮಗಾರಿ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರ ಮೇಲೆ ಟ್ಯಾಂಕ್ನ ಮೇಲ್ಛಾವಣಿ ಕುಸಿದು ಮೂವರು ಮೃತಪಟ್ಟಿದ್ದರು. 12ಕ್ಕೂ ಹೆಚ್ಚು ಜನ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರು. ಈ ಸಂಬಂಧ ಮೇಸ್ತ್ರಿಯನ್ನು ವಶಕ್ಕೆ ಪಡೆದಿರುವ ಅಮೃತಹಳ್ಳಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿ, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.