ಆನೇಕಲ್: ಕೆಲಸ ಮಾಡುವ ಸಮಯದಲ್ಲಿ ವಿದ್ಯುತ್ ತಂತಿ ಮೇಲೆ ಆಯತಪ್ಪಿ ಬಿದ್ದು ಕಟ್ಟಡ ಕೂಲಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಆನೇಕಲ್ ಉಪವಿಭಾದ ಜಿಗಣಿಯಲ್ಲಿ ನಡೆದಿದೆ.
ವಿದ್ಯುತ್ ತಂತಿ ಸ್ಪರ್ಶ: ಕಟ್ಟಡ ಕೂಲಿ ಕಾರ್ಮಿಕ ಸಾವು - ಆನೇಕಲ್ನಲ್ಲಿ ಕೂಲಿ ಕಾರ್ಮಿಕ ಸಾವು
ಕಟ್ಟಡ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಮೇಲೆ ಬಿದ್ದು ಕೂಲಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಆನೇಕಲ್ಲಿನ ಉಪವಿಭಾದ ಜಿಗಣಿಯಲ್ಲಿ ಬೆಳಕಿಗೆ ಬಂದಿದೆ.
![ವಿದ್ಯುತ್ ತಂತಿ ಸ್ಪರ್ಶ: ಕಟ್ಟಡ ಕೂಲಿ ಕಾರ್ಮಿಕ ಸಾವು Wage labour died](https://etvbharatimages.akamaized.net/etvbharat/prod-images/768-512-12337472-thumbnail-3x2-bnugjpg.jpg)
ಕಟ್ಟಡ ಕೂಲಿ ಕಾರ್ಮಿಕ ಸಾವು
ತಮಿಳುನಾಡು ಮೂಲದ ಪುದುಕೋಟೆ ನಿವಾಸಿ ವಿಜಯ್ ಕುಮಾರ್ ಸಾವನ್ನಪ್ಪಿದ ಕಟ್ಟಡ ಕಾರ್ಮಿಕ. ಈತ ರಾಜಾಪುರದ ಶಿವಕುಮಾರ್ ಎಂಬುವವರ ಕಟ್ಟಡದ ಪ್ಲಾಸ್ಟಿಂಗ್ ಕೆಲಸ ಮಾಡುತ್ತಿದ್ದರು. ಈ ವೇಳೆ ಕಟ್ಟಡದ ಪಕ್ಕದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ಮೇಲೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಜಿಗಣಿ ಪೊಲೀಸರು ಹಾಗೂ ಬೆಸ್ಕಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.