ಬೆಂಗಳೂರು: ರಾಂಪುರ ಮಠದ ವಿಶ್ವೇಶ್ವರ ಹಾಲಸ್ವಾಮಿ ಶ್ರೀಗಳ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ವಿಶ್ವೇಶ್ವರ ಹಾಲಸ್ವಾಮೀಜಿ ನಿಧನ: ಸಿಎಂ ಬಿಎಸ್ವೈ ಸಂತಾಪ - Vishweshwara Shivacharya Sri death
ಹೊನ್ನಾಳಿ ತಾಲೂಕು ರಾಂಪುರದ ಸದ್ಗುರು ಶಿವಯೋಗಿ ಹಾಲಸ್ವಾಮಿ ಬೃಹನ್ಮಠದ ಪರಮಪೂಜ್ಯ ಶ್ರೀ ವಿಶ್ವೇಶ್ವರ ಹಾಲಸ್ವಾಮಿಗಳ ನಿಧನಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ಸಿಎಂ ಬಿಎಸ್ವೈ ಕುಟುಂಬದಿಂದ ಸಂತಾಪ
ಹೊನ್ನಾಳಿ ತಾಲೂಕು ರಾಂಪುರದ ಸದ್ಗುರು ಶಿವಯೋಗಿ ಹಾಲಸ್ವಾಮಿ ಬೃಹನ್ಮಠದ ಪರಮಪೂಜ್ಯ ಶ್ರೀ ವಿಶ್ವೇಶ್ವರ ಹಾಲಸ್ವಾಮಿಗಳು ಲಿಂಗೈಕ್ಯರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಭಗವಂತನು ಅವರಿಗೆ ಮೋಕ್ಷ ಕರುಣಿಸಲಿ ಹಾಗೂ ಗುರುಗಳ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಭಕ್ತಾದಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೇ ಗುರುಗಳ ಅಗಲಿಕೆಗೆ ಸಂಸದ ಬಿ.ವೈ. ರಾಘವೇಂದ್ರ ಮತ್ತು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.