ಬೆಂಗಳೂರು:ಸಿಸಿಬಿ ಪೊಲೀಸರು ನಿನ್ನೆ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿದ್ದ ವಿರೇನ್ ಖನ್ನಾನನ್ನು ಖೆಡ್ಡಾಕ್ಕೆ ಕೆಡವಿದ್ರು. ಸದ್ಯ ಖನ್ನಾ ಬಗ್ಗೆ ಮತ್ತೊಂದು ಸ್ಫೋಟಕ ಮಾಹಿತಿ ಬಯಲಾಗಿದೆ.
ಪಾರ್ಟಿ ಮಾಡಬೇಕಾದವನು ಸಿಸಿಬಿ ವಶದಲ್ಲಿ: ಇಂದು ನಡೆಯಲಿದ್ದ ದೊಡ್ಡ ಪಾರ್ಟಿ ರದ್ದು! - ಬೆಂಗಳೂರು
ಸಿಸಿಬಿ ಪೊಲೀಸರ ಖೆಡ್ಡಾಕ್ಕೆ ಬೀಳದೆ ಹೋಗಿದ್ರೆ ಇಂದು ಒಂದು ದೊಡ್ಡ ಪಾರ್ಟಿಯನ್ನ ಆಯೋಜಿಸಲು ವೀರೇನ್ ಖನ್ನಾ ಪ್ಲಾನ್ ಮಾಡಿದ್ದ. ಆದರೆ ವೀರೇನ್ ಅರೆಸ್ಟ್ ಆದ ಹಿನ್ನೆಲೆ ಪಾರ್ಟಿ ಕ್ಯಾನ್ಸಲ್ ಆಗಿದೆ.
ಸಿಸಿಬಿ ಪೊಲೀಸರ ಖೆಡ್ಡಾಕ್ಕೆ ಬೀಳದೆ ಹೋಗಿದ್ರೆ ಇಂದು ಒಂದು ದೊಡ್ಡ ಪಾರ್ಟಿಯನ್ನ ಆಯೋಜಿಸಲು ವೀರೇನ್ ಖನ್ನಾ ಪ್ಲಾನ್ ಮಾಡಿದ್ದ. ಈ ಪಾರ್ಟಿ ಬೆಂಗಳೂರಿನಲ್ಲಿ ಇಂದು ನಡೆಯಬೇಕಿತ್ತು. ಆದರೆ ವೀರೇನ್ ಅರೆಸ್ಟ್ ಆದ ಹಿನ್ನೆಲೆ ಪಾರ್ಟಿ ಕ್ಯಾನ್ಸಲ್ ಆಗಿದ್ದು, ನಿಗದಿಯಾಗಿದ್ದ ಮೋಜಿನ ಪಾರ್ಟಿಯಲ್ಲಿ ಬೆಂಗಳೂರಿನ ದೊಡ್ಡ ನಟ, ನಟಿಯರು, ಉದ್ಯಮಿಗಳು ಭಾಗಿಯಾಗಲಿದ್ದರು ಎನ್ನಲಾಗಿದೆ. ಈ ಪಾರ್ಟಿ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ನಡೆಯಲಿತ್ತೆಂಬ ಮಾಹಿತಿ ಸಿಸಿಬಿ ಅಧಿಕಾರಿಗಳಿಂದ ಹೊರಬಿದ್ದಿದೆ.
ಸದ್ಯ ವಿರೇನ್ ಖನ್ನಾನನ್ನ ಸಿಸಿಬಿ ಪೊಲೀಸರು ಖೆಡ್ಡಾಕ್ಕೆ ಕೆಡವಿ ತನಿಖೆ ಶುರು ಮಾಡಿದ್ದು, ಬಾಲಿವುಡ್ ಹಾಗೂ ಸ್ಯಾಂಡಲ್ವುಡ್ ಸ್ಟಾರ್ಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ ವಿಚಾರ ಬಯಲಾಗಿದೆ. ಹೀಗಾಗಿ ವಿರೇಶ್ ಬಳಿಯಿಂದ ಸಿಸಿಬಿ ಅಧಿಕಾರಿಗಳು ಇನ್ನೂ ಹಲವು ಮಾಹಿತಿ ಕಲೆಹಾಕಲಿದ್ದಾರೆ. ಹಾಗೇ ರಾಗಿಣಿ ಆಪ್ತ ರವಿಶಂಕರ್ ಹಾಗೂ ಸಂಜನಾ ಆಪ್ತ ರಾಹುಲ್ ಹಾಗೂ ಕಾರ್ತಿಕ್ ಈ ಪಾರ್ಟಿಯಲ್ಲಿ ಭಾಗಿಯಾಗಲು ರೆಡಿಯಾಗಿದ್ದರು ಎಂಬ ವಿಚಾರ ಕೂಡ ಅಧಿಕಾರಿಗಳಿಗೆ ತಿಳಿದು ಬಂದಿದೆ. ಈ ಪಾರ್ಟಿಯಲ್ಲಿ ಡ್ರಗ್ ಘಾಟು ಕೂಡ ಇತ್ತಾ ಅನ್ನೋದ್ರ ಬಗ್ಗೆ ತನಿಖೆ ಮುಂದುವರೆದಿದೆ.