ಬೆಂಗಳೂರು :ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಜೆಡಿಎಸ್ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದೆ. ನಾಳೆ ಸದನದಲ್ಲಿ ಕಡ್ಡಾಯವಾಗಿ ಎಲ್ಲ ಜೆಡಿಎಸ್ ಸದಸ್ಯರು ಹಾಜರಾಗುವಂತೆ ವಿಧಾನಪರಿಷತ್ನ ಜೆಡಿಎಸ್ ಮುಖ್ಯ ಸಚೇತಕ ಎನ್.ಅಪ್ಪಾಜಿಗೌಡ ಅವರು ಸದಸ್ಯರಿಗೆ ವಿಪ್ ಜಾರಿಮಾಡಿದ್ದಾರೆ.
ನಾಳೆ ವಿಧಾನ ಪರಿಷತ್ ಚುನಾವಣೆ : ಜೆಡಿಎಸ್ ಸದಸ್ಯರಿಗೆ ವಿಪ್ ಜಾರಿ
ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮೇಲ್ಮನೆ ಸಭಾಪತಿ ಸ್ಥಾನ ಜೆಡಿಎಸ್ಗೆ ಲಭಿಸಿರುವುದರಿಂದ ಜೆಡಿಎಸ್ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಇಂದು ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು..
ಜೆಡಿಎಸ್ ಸದಸ್ಯರಿಗೆ ವಿಪ್ ಜಾರಿ
ಇಂದಿನಿಂದ ಸದನ ಮುಗಿಯುವವರೆಗೂ ಕಲಾಪಗಳಲ್ಲಿ ಸದಸ್ಯರು ಹಾಜರಾಗಬೇಕೆಂದು ವಿಪ್ನಲ್ಲಿ ಸೂಚಿಸಲಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮೇಲ್ಮನೆ ಸಭಾಪತಿ ಸ್ಥಾನ ಜೆಡಿಎಸ್ಗೆ ಲಭಿಸಿರುವುದರಿಂದ ಜೆಡಿಎಸ್ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಇಂದು ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಈಗಾಗಲೇ ಉಪಸಭಾಪತಿ ಸ್ಥಾನ ಬಿಜೆಪಿ ಪಾಲಾಗಿದೆ.
ಇದನ್ನೂ ಓದಿ:ನೇಕಾರರ ಅಭಿವೃದ್ಧಿ ನಿಗಮ ಸ್ಥಾಪನೆ ಇಲ್ಲ: ಶ್ರೀಮಂತ ಪಾಟೀಲ್ ಸ್ಪಷ್ಟನೆ