ಕರ್ನಾಟಕ

karnataka

ETV Bharat / state

ಬ್ಯಾಂಕ್ ಆಪ್ ಬರೋಡಾಗೆ ವಿಲೀನವಾದ ವಿಜಯ, ದೇನಾ ಬ್ಯಾಂಕ್

ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕಿನ ಠೇವಣಿದಾರರೂ ಸೇರಿದಂತೆ ಎಲ್ಲ ಗ್ರಾಹಕರನ್ನು ಬ್ಯಾಂಕ್ ಆಫ್ ಬರೋಡಾ ಗ್ರಾಹಕರೆಂದು ಇಂದಿನಿಂದ ಪರಿಗಣಿಸಲಾಗಿದೆ.

By

Published : Apr 1, 2019, 8:33 PM IST

ಬ್ಯಾಂಕ್ ಆಪ್ ಬರೋಡಾ ಗೆ ವಿಲೀನವಾದ ವಿಜಯ,ದೇನಾ ಬ್ಯಾಂಕ್

ಬೆಂಗಳೂರು : ಬ್ಯಾಂಕ್ ಆಫ್ ಬರೋಡಾ, ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ವಿಲೀನಗೊಂಡಿವೆ. ದೇಶದ ಸಾರ್ವಜನಿಕ ವಲಯದ ಎರಡನೇ ಅತಿದೊಡ್ಡ ಕ್ರೋಢೀಕೃತ ಬ್ಯಾಂಕ್‌ ಇಂದಿನಿಂದ ಜಾರಿಗೆ ಬಂದಿದೆ. ಮೂರು ಬ್ಯಾಂಕ್‌ಗಳ ಆಡಳಿತ ಮಂಡಳಿಗಳು 2018ರ ಸೆಪ್ಟೆಂಬರ್‌ನಲ್ಲಿ ತಾತ್ವಿಕ ಒಪ್ಪಿಗೆ ನೀಡಿದ್ದವು. ವಿಲೀನ ಪ್ರಕ್ರಿಯೆ ಸುಲಲಿತವಾಗಿ ದಾಖಲೆ ಅವಧಿಯಲ್ಲಿ ಪೂರ್ಣಗೊಂಡಿದೆ.

ಬ್ಯಾಂಕ್ ಆಪ್ ಬರೋಡಾ ಗೆ ವಿಲೀನವಾದ ವಿಜಯ, ದೇನಾ ಬ್ಯಾಂಕ್

ಈ ಸಂಬಂಧ ಇಂದು ಬೆಂಗಳೂರಿನ‌ ಬ್ಯಾಂಕ್ ಆಫ್ ಬರೋಡಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಲಾಯಿತು. 2019ರ ಮಾರ್ಚ್ 30ರಂದು ಹೊರಡಿಸಿದ್ದ ಅಧಿಸೂಚನೆಯ ಅನ್ವಯ ಬ್ಯಾಂಕ್ ಆಫ್ ಬರೋಡಾ, ವಿಜಯಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ಗಳ ಎಲ್ಲ ಶಾಖೆಗಳು ಬ್ಯಾಂಕ್ ಆಫ್ ಬರೋಡಾ ಶಾಖೆಗಳಾಗಿ ಕಾರ್ಯ ನಿರ್ವಹಿಸಲಿವೆ. ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕಿನ ಠೇವಣಿದಾರರೂ ಸೇರಿದಂತೆ ಎಲ್ಲ ಗ್ರಾಹಕರನ್ನು ಬ್ಯಾಂಕ್ ಆಫ್ ಬರೋಡಾ ಗ್ರಾಹಕರಾಗಿ ಪರಿಗಣಿಸಲಾಗುತ್ತದೆ.

ಕ್ರೋಢೀಕೃತ ಬ್ಯಾಂಕ್ ಆಗಿ ಬಂದ ಬ್ಯಾಂಕ್ ಆಫ್ ಬರೋಡಾ

ಈ ಕ್ರೋಢೀಕೃತ ಬ್ಯಾಂಕ್, ದೇಶದ ಸಾರ್ವಜನಿಕ ವಲಯದ ಎರಡನೇ ಅತಿದೊಡ್ಡ ಬ್ಯಾಂಕ್ ಎನಿಸಿಕೊಂಡಿದೆ. ವಿಲೀನಗೊಂಡ ಸಂಸ್ಥೆಯು ವಿಸ್ತ್ರತವಾದ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿದ್ದು, 9500ಕ್ಕೂ ಹೆಚ್ಚು ಶಾಖೆಗಳು ಹಾಗೂ 13400ಕ್ಕೂ ಹೆಚ್ಚು ಎಟಿಎಂಗಳನ್ನು, 85 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ. ಅಲ್ಲದೆ, 12 ಕೋಟಿಗೂ ಅಧಿಕ ಗ್ರಾಹಕರಿಗೆ ಸೇವೆ ಒದಗಿಸಲಿದೆ. ಒಟ್ಟಾರೆ 15 ಲಕ್ಷ ಕೋಟಿಗೂ ಅಧಿಕ ವ್ಯವಹಾರವನ್ನು ಹೊಂದಿದ್ದು, 8.75 ಲಕ್ಷ ಕೋಟಿ ರೂಪಾಯಿಗೂ ಅಧಿಕ ಠೇವಣಿಗಳು ಹಾಗೂ 6.25 ಲಕ್ಷ ಕೋಟಿಗೂ ಅಧಿಕ ಮುಂಗಡವನ್ನು ಹೊಂದಿದೆ.

ವಿದೇಶಿ ಕರೆನ್ಸಿ ನೆರವು ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಗ್ರಾಹಕರಿಗೆ ಲಭ್ಯವಾಗಲಿದೆ. ಇದರ ಜತೆಗೆ ಬ್ಯಾಂಕ್ ಆಫ್ ಬರೋಡಾದ 101 ಅಂತಾರಾಷ್ಟ್ರೀಯ ಶಾಖೆಗಳ ಸೇವೆಯನ್ನೂ ಪಡೆಯಲಿದ್ದಾರೆ. ವಿಜಯ ಬ್ಯಾಂಕಿನ ವಿಶಿಷ್ಟ ಯೋಜನೆಗಳಾದ ಎಸ್ಆರ್​ಟಿಒ ಫಂಡಿಂಗ್, ಪ್ಲಾಂಟೇಷನ್ ಫೈನಾನ್ಸಿಂಗ್ ಸೌಲಭ್ಯಗಳು ಇತರ ಎರಡು ಬ್ಯಾಂಕ್​ಗಳ ಗ್ರಾಹಕರಿಗೂ ದೊರಯಲಿವೆ.

ABOUT THE AUTHOR

...view details