ಕರ್ನಾಟಕ

karnataka

ETV Bharat / state

ಸಿಎಂ ಕೋವಿಡ್ ಪರಿಹಾರ ನಿಧಿಗೆ ವಿಭೂತಿಪುರ ಮಠದಿಂದ 5 ಲಕ್ಷ ರೂ. ದೇಣಿಗೆ ಸಲ್ಲಿಕೆ...! - Covid 19 relief fund

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ವಿಭೂತಿಪುರ ಮಠದ ಶ್ರೀಗಳು ಭೇಟಿ ನೀಡಿ ಸಿಎಂಗೆ ಮಠದಿಂದ ಕೋವಿಡ್​-19 ಪರಿಹಾರ ನಿಧಿಗೆ 5 ಲಕ್ಷ ಚಕ್ ನೀಡಿದರು.

Donation
Donation

By

Published : Jun 3, 2020, 1:18 PM IST

ಬೆಂಗಳೂರು:ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ 5 ಲಕ್ಷ ರೂ.ಗಳ ಪರಿಹಾರದ ಚಕ್ ಸಲ್ಲಿಕೆ ಮಾಡಿದ್ದಾರೆ.

ಕರ್ನಾಟಕದ 6.5 ಕೋಟಿ ಜನರ ಹೆಮ್ಮೆಯ ಮುಖ್ಯಮಂತ್ರಿಗಳಾದ ತಾವು ತಮ್ಮ ಆರೋಗ್ಯವನ್ನು ವಯಸ್ಸನ್ನೂ ಗಮನಿಸದೇ ಕೊರೊನಾ ಸಂಕಷ್ಟದಿಂದ ರಾಜ್ಯದ ಜನರನ್ನು ರಕ್ಷಣೆ ಮಾಡಲು ಹಗಲಿರುಳು ದುಡಿಯುತ್ತಿದ್ದೀರಿ. ರಾಜ್ಯಕ್ಕೆ ಎಂತಹುದೇ ಪ್ರಕೃತಿ ವಿಕೋಪಗಳು ಬಂದೊದಗಿದಾಗಲೂ ನಾವು ಅತ್ಯಂತ ಸಮರ್ಥವಾಗಿ ನಿಭಾಯಿಸಿ ರಾಜ್ಯವನ್ನು ರಾಜ್ಯದ ಜನರನ್ನು ಕಾಪಾಡುತ್ತಿದ್ದೀರಿ.

ಪ್ರಸ್ತುತ ಸಮಯದಲ್ಲಿ ತಮ್ಮ ಸುದೀರ್ಘ ಕಾಲದ ಜನಸೇವೆಯ ಅನುಭವ ಮತ್ತು ರಾಜ್ಯದ ಜನತೆಯ ಮೇಲಿನ ಕಾಳಜಿಯಿಂದ ಕೊರೊನಾ ವೈರಸ್‌ನಿಂದ ಆಗಬಹುದಾದ ಬಹುದೊಡ್ಡ ಆಪತ್ತನಿಂದ ರಾಜ್ಯವನ್ನು ಕಾಪಾಡುತ್ತಿದ್ದೀರಿ. ತಮ್ಮ ಈ ಕಾರ್ಯ ದಲ್ಲಿ ನಾನು ಅಳಿಲು ಸೇವೆಯಂತೆ ಭಾಗಿಯಾಗೋಣವೆಂದು ನಮ್ಮ ಶ್ರೀಮಠದ ಅಭಿಮಾನಿ ಭಕ್ತವೃಂದಕ್ಕೆ ನನ್ನ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸುವುದು ಬೇಡ ಎಂದು ತೀರ್ಮಾನಿಸಿದ್ದು, ಬದಲಾಗಿ ತಮ್ಮ ಕೈಲಾದ ಧನಸಹಾಯವನ್ನು ಸಿಎಂ ಕೋವಿಡ್ ಪರಿಹಾರ ನಿಧಿಗೆ ನೀಡಿ ಎಂದು ಮನವಿ ಮಾಡಿದ್ದಾರೆ. ಭಕ್ತರ ಮನವಿಯನ್ನ ಮನ್ನಿಸಿ ನಮ್ಮ ಶ್ರೀಮಠದ ಅಭಿಮಾನಿ ಬಳಗ ಉದಾರವಾಗಿ ದಾನ ಮಾಡಿದೆ.

ಮಠದಿಂದ ಈ ಹಣವನ್ನು ನೀಡುವುದಲ್ಲದೇ 70 ಜನ ಆರೋಗ್ಯ ಕಾರ್ಯಕರ್ತರಿಗೆ ಮತ್ತು 55 ಜನ ಸರ್ಕಾರೇತರ ದೇವಾಲಯಗಳ ಅರ್ಚಕರಿಗೆ ತಲಾ 25 ಕೆಜಿ ಅಕ್ಕಿಯನ್ನು ನೀಡಿ ಗೌರವಿಸಿದ್ದೇವೆ. ತಾವು ಮಾಡುತ್ತಿರುವ ಜನ ಸೇವೆ ಅಪಾರ. ಈ ಸಮಯದಲ್ಲಿ ತಮ್ಮನ್ನು ಮುಖ್ಯಮಂತ್ರಿಗಳಾಗಿ ನಾವೆಲ್ಲ ಪಡೆದಿದ್ದು ಮತ್ತು ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಯಾಗಿ ಪಡೆದ್ದದ್ದು ನಮ್ಮ ರಾಜ್ಯ ಮತ್ತು ದೇಶದ ಜನತೆಯ ಸೌಭಾಗ್ಯವೇ ಸರಿ. ಕೊರೊನಾ ಸಂಕಷ್ಟದಿಂದ ಜನರನ್ನು ಕಾಪಾಡಲು ನಮಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮತ್ತು ಆದಿ ಜಗದ್ಗುರು ರೇಣುಕಾದಿ ಪಂಚಾಚಾರ್ಯರಲ್ಲಿ ಪ್ರಾರ್ಥಿಸುತ್ತೇವೆ ಎಂದು ಶ್ರೀಗಳು ಸಿಎಂಗೆ ತಾವು ಬರೆದ ಪತ್ರವನ್ನು ನೀಡಿದರು.

ABOUT THE AUTHOR

...view details