ಬೆಂಗಳೂರು:ಕನ್ನಡ ಚಿತ್ರರಂಗದ ಅಭಿನಯ ಶಾರದೆ ಜಯಂತಿಗೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವರ್ಷ ಆಸ್ತಮಾ ರೋಗಕ್ಕೆ ಚಿಕಿತ್ಸೆ ಪಡೆದಿದ್ದ ಜಯಂತಿಗೆ, ಇದೀಗ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಿರಿಯ ನಟಿ ಜಯಂತಿ ಆಸ್ಪತ್ರೆಗೆ ದಾಖಲು... ವೆಂಟಿಲೇಟರ್ನಲ್ಲಿ ಚಿಕಿತ್ಸೆ!
ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ದಾಖಲಾಗಿರುವ ಹಿರಿಯ ನಟಿ ಜಯಂತಿ ಸದ್ಯ ಕೃತಕ ಉಸಿರಾಟದ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿ ಆರೋಗ್ಯದ ಬಗ್ಗೆ ಮಗ ಕೃಷ್ಣಕುಮಾರ್ ಈಟಿವಿ ಭಾರತದ ಜೊತೆ ಮಾತನಾಡಿದ್ದು, ಅಮ್ಮನ ಆರೋಗ್ಯ ಚೆನ್ನಾಗಿದೆ ಎಂದಿದ್ದಾರೆ.
ಅಮ್ಮ ಆರೋಗ್ಯವಾಗಿಯೇ ಇದ್ದಾರೆ...ಹಿರಿಯ ನಟಿ ಜಯಂತಿ ಪುತ್ರ ಸ್ಪಷ್ಟನೆ
ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ದಾಖಲಾಗಿರುವ ಜಯಂತಿ ಸದ್ಯ ಕೃತಕ ಉಸಿರಾಟದ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿ ಆರೋಗ್ಯದ ಬಗ್ಗೆ ಮಗ ಕೃಷ್ಣಕುಮಾರ್ ಈಟಿವಿ ಭಾರತದ ಜೊತೆ ಮಾತನಾಡಿದ್ದು, ಅಮ್ಮನ ಆರೋಗ್ಯ ಚೆನ್ನಾಗಿದೆ ಅಂದಿದ್ದಾರೆ.
ಡಾ. ಸತೀಶ್ ಎಂಬುವವರು ಚಿಕಿತ್ಸೆ ನೀಡುತ್ತಿದ್ದು, ಅವರಿಗೆ ಈಗಾಗಲೇ ಕೊರೊನಾ ಟೆಸ್ಟ್ ಕೂಡ ಮಾಡಿಸಿದ್ದು ವರದಿ ನೆಗೆಟಿವ್ ಬಂದಿದೆ. ಪ್ರತಿ ಬಾರಿ ಆಸ್ಪತ್ರೆಗೆ ದಾಖಲಿಸಿದ ವೇಳೆ ಭಯ ಇರುತ್ತೆ , ಅದ್ರೂ ನನಗೆ ನಂಬಿಕೆ ಇದೆ ಅಂತಾ ಕೃಷ್ಣ ಕುಮಾರ್ ತಿಳಿಸಿದ್ದಾರೆ.